ಅಂಕಣಗಳು

ರಾಜ್ಯಕ್ಕೆ ಸೂಕ್ತ ನಾಯಕನಾರು? ಯುವಜನ ಅವಲೋಕನ

ರಾಜ್ಯಕ್ಕೆ ಸೂಕ್ತ ನಾಯಕನಾರು? ಯುವಜನ ಅವಲೋಕನ

ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಇರುವ ರಾಜಕೀಯ ವಾತಾವರಣ ಈಗ ಇಲ್ಲದಂತಾಗಿರುವುದು ಯುವಜನ ದೂರದರಷ್ಟಿಯಿಂದ ಮುಂದಿನ ರಾಜಕೀಯ ನಡೆಯನ್ನು ನಿರ್ಣಯಿಸುವ ಕಾಲಘಟ್ಟ. ಈ ನಿಟ್ಟಿನಲ್ಲಿ ವಿಚಾರ ಮಾಡುವುದಾದರೆ ಕಳೆದ ಹತ್ತು ವರ್ಷಗಳಿಂದ ರಾಜ್ಯದಲ್ಲಿ ವಾಸ್ತವವಾಗಿ ಏನಾದರೂ ಬೆಳವಣಿಗೆ ಆಗಿದೆಯಾ? ಕೈಗಾರೀಕರಣ ಇರಬಹುದು, ಯುವಕರಿಗೆ ಪ್ರಾಮಾಣಿಕವಾಗಿ ಉದ್ಯೋಗ ಒದಗಿಸಿಕೊಡುವುದಾಗಿರಬಹುದು, ಮಹಿಳಾ ಸಬಲೀಕರಣಕ್ಕೆ ತಕ್ಕಂತೆ ಯೋಜನೆಗಳು, ಮಾನವ ಹಕ್ಕುಗಳ ಚ್ಯುತಿ ಬರದಹಾಗೆ ಆಡಳಿತ ನಡೆಸಿಕೊಂಡು ಹೋಗುವ ವ್ಯಕ್ತಿ ಹಾಗೂ ವ್ಯಕ್ತಿತ್ವ ಇಲ್ಲಿ ಪ್ರಮುಖವಾಗಿ ತರ್ಕಕ್ಕೆ ಬರುತ್ತದೆ.

ಸರಕಾರದ ಬೊಕ್ಕಸಕ್ಕೆ ಯಾರು ಎಷ್ಟು ಸಾಲ ಹೊರೆಯನ್ನಾಗಿಸಿ ದಾಖಲೆ ಮಾಡಿದರು? ಅವರವರ ರಾಜಕೀಯ ನಡೆ, ವ್ಯಕ್ತಿತ್ವ, ಸಿದ್ಧಾಂತ, ಆಚಾರ-ವಿಚಾರಗಳೇನು? ಜನಸಾಮಾನ್ಯರ, ರೈತರ ಸಾವಿಗೆ, ಅಧಿಕಾರಿಗಳ ಜೀವಕ್ಕೆ ಕರುಳು ಮಿಡಿಯಿತೇ? ಇಲ್ಲವಾದರೆ ರಾಜಕೀಯ ಮಾಡುವುದೇ ಇವರ ಇಚ್ಛಾಶಕ್ತಿಯಾದರೆ, ಇವರ ಬೆಂಬಲಿತರನನ್ನು ಪ್ರತಿಷ್ಠೆಯಿಂದ ಅಪರಾಧವೆಸಗಿದ್ದರೂ ಅವರ ಬೆನ್ನಿಗೆ ನಿಂತು ಉಳಿಸಿಕೊಂಡು ಭಂಡತನದ ಪರಮಾವಧಿ ಹಾಗೂ ನಿಚ್ಚಳ ನೈಜ ಮುಖವಾಡ ತೋರಿಸಿದಾಗ ಹಂತಹಂತವಾಗಿ ಈ ರಾಜ್ಯದ ಜನತೆ ನೋಡಿರಲಿಕ್ಕಿಲ್ಲವೇ? ನಾಟಕೀಯ ಬದುಕೇ ರಾಜಕೀಯವಾದರೆ ಹಿಂದಿನ ನಾಯಕರಾರು ಇತಿಹಾಸ ಪುಟ ಸೇರಿ ಇವತ್ತಿಗೂ ಜನಮನದಲ್ಲಿರುತ್ತಿರಲಿಲ್ಲ ಅಲ್ಲವೇ?

ಹಾಗಾದರೆ ರಾಜಕೀಯವೆಂದರೆ ಒಂದು ಧರ್ಮವನ್ನು ಮಾತ್ರ ಓಲೈಕೆ ಮಾಡುವುದಾ? ರಾಜ್ಯದ ಒಬ್ಬ ಜವಾಬ್ದಾರಿಯುತ ಮುಖ್ಯಮಂತ್ರಿಯಾದವನು ತನ್ನ ಕರ್ತವ್ಯ ಹಾಗೂ ಜನ ಹಿತಾಸಕ್ತಿ ಮರೆತು ಹಿಂಬಾಲಿಗರ ಹಿತಾಸಕ್ತಿಯಂತೆ ನಡೆದರೆ ಹಾಗೂ ಅದರ ಪರಿಣಾಮ ಏನೆಂಬುದು ಇಂದಿನ ಸ್ಥತಿಗತಿ ನೋಡಿದರೆ ಸೂಕ್ಷ್ಮವಾಗಿ ರಾಜ್ಯ ರಾಜಕೀಯದ ವಾತಾವರಣ ಹಾಗೂ ಇಚ್ಛಾಶಕ್ತಿಗಳ ನೈಜ ಮುಖವಾಡಗಳ ಅನಾವರಣ ಇಡೀ ರಾಜ್ಯದ ಯುವ ಜನತೆಗೆ ಅರಿವಾಗಲಿದೆ.

ಇನ್ನೊಂದು ಸರಕಾರದ ಭ್ರಷ್ಟಾರಗಳನ್ನೇ ಮೇಲೆತ್ತಿ ಜನತೆಗೆ ತೋರಿಸಿ ಹೋರಾಟಗಾರ ಎಂಬ ಪೋಸು ನೀಡಿ ಜನತೆಯ ಅನುಕಂಪ ಗಿಟ್ಟಿಸಿ ಮತಗಳಾಗಿಯೂ ಪರಿವರ್ತನೆಯಾಗಿ ಅವಕಾಶ ಪಡೆದಾಗ ಮೊದಲ ಅವಕಾಶದಲ್ಲೇ ವಿಫಲರಾಗಿರುವುದು ಮೇಲ್ನೋಟಕ್ಕೇ ಕಂಡುಬರುತ್ತಿದೆ. ಪ್ರಾಮಾಣಿಕತೆ, ದಕ್ಷತೆ ಇರುವ ಅಧಿಕಾರಿಗಳ ಜೀವಕ್ಕೆನೇ ಬೆಲೆಕೊಡದ, ಸಾಂವಿಧಾನಿಕ ಹಕ್ಕು ಚ್ಯುತಿಮಾಡಿದ ಈ ರೀತಿಯ ರಾಜಕಾರಣಿಗಳಿಂದ ರಾಜ್ಯದ ಜನಸಾಮಾನ್ಯನಿಗೆ ಅದು ಹೇಗೆ ನ್ಯಾಯ ಒದಗಿಸಿಯಾರು? ಅವಲೋಕಿಸಿ. ಇದೊಂದು ರಾಜ್ಯ ಕಂಡ ದುರಂತದ ಅವಧಿ. ಇನ್ನೆಂದೂ ಮರುಕಳಿಸದಿರಲಿ ಇಂತಹ ಮಾರಣಹೋಮಗಳ ದಿನಗಳು ಹಾಗೂ ಇಂತಹ ಕುಕೃತ್ಯಕ್ಕಿಳಿದು ರಾಜಕೀಯ ಮಾಡುವ ಮನಸ್ಸುಗಳಿಂದಲೂ ದೂರವಿರಬೇಕಾದುದು ಯುವ ಶಕ್ತಿ, ಯುವ ಜಾಗೃತ ಮನಸ್ಸುಗಳ ಸಂಕಲ್ಪವಾಗಲಿ. ಅಭಿವೃದ್ಧಿ ಹೆಸರಲಿ ಲಕ್ಷಾಂತರ ಕೋಟಿ ಸಾಲದ ಹೊರೆಯಾಗಿಸಿ ಮುಂದಿನ ಸರಕಾರಕ್ಕೆ ದೊಡ್ಡ ಸಂಚಕಾರವನ್ನೇ ತಂದೊಡ್ಡಿದ ಹೀನ ಮನಸ್ಥಿತಿ ರಾಜಕೀಯ ಇಚ್ಛಾಶಕ್ತಿಗಳಿಗೆ ಧಿಕ್ಕಾರವಿರಲಿ.

ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಸಂಸ್ಕಾರಯುತ, ಮಾನವೀಯ ಮೌಲ್ಯ, ಸರ್ವ ಧರ್ಮ ಸಮಾನತೆಯಿಂದ ಪ್ರಮುಖವಾಗಿ ಎಲ್ಲಾ ವರ್ಗದ ಬಡಜನತೆಯನ್ನು ಒಂದೇ ದೃಷ್ಟಿಕೋನದಿಂದ ಕಾಣುವ ವ್ಯಕ್ತಿಯನ್ನು ನಾವು ಆಯ್ಕೆ ಮಾಡುವಂತಗಬೇಕು ಆಗ ವಿದ್ಯಾವಂತ ಯುವ ಜನ ಈ ರಾಜ್ಯದ ಬದಲಾವಣೆಯಲ್ಲೂ ಪಾಲುದಾರರಾಗುತ್ತಾರೆ ಎಂಬುದು ಈ ಲೇಖನದ ಆಶಯ.

                                                                           -ವೀರೇಶ್ ಎ.ನಾಡಗೌಡರ್

About the author

ಕನ್ನಡ ಟುಡೆ

Leave a Comment