ರಾಷ್ಟ್ರ

ರಾಜ್ಯದಲ್ಲಿ 10ನೇ ತರಗತಿ ಗಣಿತ ಮರುಪರೀಕ್ಷೆ ಇಲ್ಲ

ಸಿಬಿಎಸ್‌ಇ ಮರುಪರೀಕ್ಷೆ 12ನೇ ತರಗತಿಗೆ ಮಾತ್ರ

ಹೊಸದಿಲ್ಲಿ: ಹತ್ತನೇ ತರಗತಿಯ ಗಣಿತ ಪರೀಕ್ಷೆ ಕರ್ನಾಟಕದಲ್ಲಿ ಸೋರಿಕೆ ಆಗದಿರುವ ಹಿನ್ನೆಲೆಯಲ್ಲಿ  ರಾಜ್ಯ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ಭೀತಿ ಇಲ್ಲ. ಆದರೆ ಇಕನಾಮಿಕ್ಸ್‌ ಪರೀಕ್ಷೆಯನ್ನು ಮತ್ತೆ ಬರೆಯಬೇಕಾಗುತ್ತದೆ ಎಂದು ಸಿಬಿಎಸ್‌ಇ ಹೇಳಿದೆ. ಈ ಮೂಲಕ ರಾಜ್ಯದ ವಿದ್ಯಾರ್ಥಿಗಳಿಗೆ ಕೊಂಚ ರಿಲೀಫ್ ನೀಡಿದೆ.

ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ  ಮರುಪರೀಕ್ಷೆ  ದಿನಾಂಕ ಘೋಷಣೆಯಾಗಿದ್ದು, ಹನ್ನೆರಡನೇ ತರಗತಿಯ ಇಕನಾಮಿಕ್ಸ್‌ ಪರೀಕ್ಷೆ ದೇಶಾದ್ಯಂತ ಎ.25ರಂದು ನಡೆಯಲಿದೆ. ಆದರೆ, ಹತ್ತನೇ ತರಗತಿ ಗಣಿತ ಮರುಪರೀಕ್ಷೆ ಅಗತ್ಯವಿದೆಯೇ ಎಂದು ಇನ್ನು 15 ದಿನಗಳಲ್ಲಿ ತೀರ್ಮಾನಿಸಿ, ಅಗತ್ಯಬಿದ್ದರೆ ದಿಲ್ಲಿ, ಹರಿಯಾಣ ಮತ್ತು ರಾಷ್ಟ್ರೀಯ ರಾಜಧಾನಿ ವ್ಯಾಪ್ತಿಯಲ್ಲಿ ಮಾತ್ರ ನಡೆಸಲಾಗುತ್ತದೆ ಎಂದು ಸಿಬಿಎಸ್‌ಇ ತಿಳಿಸಿದೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅನಿಲ್‌ ಸ್ವರೂಪ್‌ ಶುಕ್ರವಾರ ಈ ಮಾಹಿತಿ ನೀಡಿದ್ದಾರೆ. ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆ ಮಾಹಿತಿ ಪ್ರಕಾರ ದಿಲ್ಲಿ, ಹರಿಯಾಣ, ಎನ್‌ಸಿಆರ್‌ ವ್ಯಾಪ್ತಿಯಲ್ಲಿ ಮಾತ್ರ ಹತ್ತನೇ ತರಗತಿ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಹೀಗಾಗಿ ಈ ಮೂರು ಸ್ಥಳಗಳಿಗೆ ಮಾತ್ರ ಮರು ಪರಿಕ್ಷೆ ನಡೆಸುವ ಕುರಿತು ಪರಿಶೀಲಿಸಲಿದ್ದೇವೆ ಎಂದಿದ್ದಾರೆ ಸ್ವರೂಪ್‌.

ವಿದೇಶಗಳಲ್ಲಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ ವ್ಯಾಪ್ತಿಗೆ ವಿದೇಶಗಳಲ್ಲಿಯೂ ಶಾಲೆಗಳಿದ್ದು, ಅಲ್ಲಿ ಸಮಸ್ಯೆ ಉದ್ಭವಿಸದೇ ಇರುವ ಹಿನ್ನೆಲೆಯಲ್ಲಿ ಮರು ಪರೀಕ್ಷೆ ಅಗತ್ಯವಿಲ್ಲ ಎಂದಿದ್ದಾರೆ.

ನಿಗದಿಯಾಗಿರುವಂತೆ ಫ‌ಲಿತಾಂಶ: ಇದೇ ವೇಳೆ ದಿಲ್ಲಿ, ಹರಿಯಾಣ, ಎನ್‌ಸಿಆರ್‌ ಹೊರತು ಪಡಿಸಿ ದೇಶದ ಉಳಿದ ಭಾಗಗಳಲ್ಲಿ ಈಗಾಗಲೇ ನಿಗದಿಯಾಗಿರುವಂತೆ ಫ‌ಲಿತಾಂಶ ಪ್ರಕಟಿಸಲಾ ಗುತ್ತದೆ ಎಂದು ಸಿಬಿಎಸ್‌ಇ ಹೇಳಿದೆ.

ಸೋರಿಕೆ ತಡೆಗೆ ನೆರವಾಗಿ
ಪ್ರಶ್ನೆಪತ್ರಿಕೆ ಸೋರಿಕೆ ಸಮಸ್ಯೆ ತಡೆಯಲು ನೆರವಾಗಿ ಎಂದು ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಸಚಿವ ಜಾಬ್ಡೇಕರ್‌ ಮನವಿ ಮಾಡಿದ್ದಾರೆ. ಸೋರಿಕೆ ತಡೆಯಲೋಸುಗವೇ ಒಂದು ವ್ಯವಸ್ಥೆ ಅಭಿವೃದ್ಧಿಪಡಿಸಿ ಎಂದಿದ್ದಾರೆ. “ಭಾರತದಂಥ ದೇಶದಲ್ಲಿ  ಸಾವಿರಾರು ವಿದ್ಯಾರ್ಥಿಗಳಿಗಾಗಿ  ಪ್ರಶ್ನೆಪತ್ರಿಕೆಯನ್ನು ನಿಗದಿತ ಸ್ಥಳದಲ್ಲಿ ಮುದ್ರಿಸಿ, ಪ್ಯಾಕ್‌ ಮಾಡಿ ನಿಗದಿತ ಕೇಂದ್ರಗಳಿಗೆ ಕಳುಹಿಸಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಯಾರೂ ಭದ್ರತೆ ಉಲ್ಲಂ ಸಲಾರರು ಎಂದು ಹೇಗೆ ಹೇಳುವುದು’ ಎಂದು ಆತಂಕ ತೋಡಿಕೊಂಡಿದ್ದಾರೆ.

About the author

ಕನ್ನಡ ಟುಡೆ

Leave a Comment