ರಾಜಕೀಯ

ರಾಜ್ಯದಲ್ಲಿ 22, ದೇಶದಲ್ಲಿ ಬಿಜೆಪಿಗೆ 300 ಸೀಟುಗಳಲ್ಲಿ ಜಯ, ಮಂಡ್ಯದಲ್ಲಿ ಸುಮಲತಾ ಗೆಲವು ಶತಃಸಿದ್ಧ: ಬಿಎಸ್ ವೈ

ಕಲಬುರಗಿ: ಸೊಕ್ಕಿನ ಮಾತುಗಳನ್ನು ಆಡುವ ಮೂಲಕ ಸುಮಲತಾ ಅವರನ್ನು  ಜೆಡಿಎಸ್ ನಾಯಕರು ಅಪಮಾನ ಮಾಡುತ್ತಿದ್ದಾರೆ ಇದಕ್ಕೆಲ್ಲಾ ಏಪ್ರಿಲ್ 18ರಂದು ಉತ್ತರ ಸಿಗಲಿದೆ, ಸುಮಲತಾ ಅಂಬರೀಷ್ ಅವರ ಗೆಲುವು ಶತಃಸಿದ್ದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್,ಯಡಿಯೂರಪ್ಪ ಹೇಳಿದ್ದಾರೆ. ಕಲಬುರಗಿಯ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ನಾಮಪತ್ರ ಸಲ್ಲಿಕೆ ವೇಳೆ ಮಾತನಾಡಿದ ಯಡಿಯೂರಪ್ಪ, ರಾಜ್ಯದಲ್ಲಿ ಬಿಜೆಪಿ 22 ಹಾಗೂ ಒಟ್ಟಾರೆ ಇಡೀ ದೇಶದಲ್ಲಿ 300 ಸೀಟುಗಳನ್ನು ಗೆಲ್ಲಲಿದೆ ಹಾಗೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ಪಡಿಸಿದ್ದಾರೆ. ಸುಮಲತಾ ಅವರ ಕುರಿತು ಜಾತಿ ರಾಜಕಾರಣವನ್ನು ಜೆಡಿಎಸ್‌ನವರು ಮಾಡುತ್ತಿದ್ದಾರೆ. ಅಲ್ಲಿನ ಎಲ್ಲರೂ ಸಹ ಹಗುರವಾಗಿ ಮಾತುಗಳನ್ನು ಆಡುತ್ತಿದ್ದಾರೆ. ಇದರಿಂದ ಬೇಸತ್ತಿರುವ ಜನತೆ ಇದೀಗ ಜೆಡಿಎಸ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹೀಗಾಗಿ, ಮಂಡ್ಯದಲ್ಲಿ 100ಕ್ಕೆ 100ರಷ್ಟು ಸುಮಲತಾ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಯಡಿಯೂರಪ್ಪ ಹೇಳಿದರು. ಕಲಬುರಗಿಯ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಗೆದ್ದೇ ಗೆಲ್ಲುತ್ತಾರೆ ಎಂದ ಯಡಿಯೂರಪ್ಪ ಅವರು, ಜಾಧವ್ ಅವರನ್ನು ಪಕ್ಷದ ಹೈ ಕಮಾಂಡ್ ಪಕ್ಷಕ್ಕೆ ಬರಮಾಡಿಕೊಂಡಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.

About the author

ಕನ್ನಡ ಟುಡೆ

Leave a Comment