ರಾಜ್ಯ ಸುದ್ದಿ

ರಾಜ್ಯದಲ್ಲಿ 4-5 ದಿನ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ದಕ್ಷಿಣ ಹಾಗೂ ಉತ್ತರ ಒಳನಾಡಿನ ಭಾಗದಲ್ಲಿ ಮುಂದಿನ 4-5 ದಿನ ಹಗುದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್’ಡಿಎಂಸಿ) ತಿಳಿಸಿದೆ.
2 ವಾರಗಳ ಹಿಂದಷ್ಟೇ ಎರಡು ಸೈಕ್ಲೋನ್ ಗಳು ಮಲೆನಾಡು ಸೇರಿದಂತೆ ಕರ್ನಾಟಕದಲ್ಲಿ ಭಾರೀ ಮಳೆ ತರಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಅದಾವುದೂ ಆಗಿರಲಿಲ್ಲ. ಒಂದು ಸೈಕ್ಲೋನ್ ಒಮನ್ ಹಾಗೂ ಮತ್ತೊಂದು ಸೈಕ್ಲೋನ್ ಒಡಿಶಾದತ್ತ ಸಾಗಿತ್ತು. ಇದರ ಪರಿಣಾಮ ಅ.1 ರಿಂದ 15ರವರೆಗೂ ರಾಜ್ಯದಲ್ಲಿ 81ಎಂಎಂನಷ್ಟು ಮಾತ್ರ ಸಾಧಾರಣ ಮಳೆಯಾಗಿತ್ತು. ರಾಜ್ಯದಲ್ಲಿ ಈವರೆಗೂ ರಾಜ್ಯದಲ್ಲಿ ಈ ವರೆಗೂ ಒಟ್ಟು 35 ಎಂಎಂನಷ್ಟು ಮಳೆಯಾಗಿದ್ದು, ಶೇ.57ರಷ್ಟು ಮಳೆ ಕೊರತೆಯುಂಟಾಗಿದೆ. ಈ ನಡುವೆ ಅರಬ್ಬೀ ಮತ್ತು ಬಂಗಾಳಕೊಲ್ಲಿಯ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ಪರಿಣಾಮ ರಾಜ್ಯದಲ್ಲಿ ಮತ್ತೆ ಮಳೆ ಪ್ರಭಾವ ಹೆಚ್ಚಾಗಿದೆ. ಮುಂದಿನ 4-5 ದಿನ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಹಿಂಗಾರು ಬಿತ್ತನೆ ಈ ಮಳೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಹಿಂಗಾರು ಮಳೆ ವಿಳಂಬಕ್ಕೆ ಕಳೆದ ವಾರ ಉಂಟಾದ ವಾಯುಭಾರ ಕುಸಿತ ಒಂದು ಪ್ರಮುಖ ಕಾರಣವಾಗಿದೆ. ಇನ್ನು ಭಾರತೀಯ ಹವಾಮಾನ ಇಲಾಖೆ ಹಿಂಗಾರು ಮಳೆಯನ್ನು ಘೋಷಣೆ ಮಾಡಿಲ್ಲ ಎಂದು ತಿಳಿದುಬಂದಿದೆ.

About the author

ಕನ್ನಡ ಟುಡೆ

Leave a Comment