ಪರಿಸರ

ರಾಜ್ಯದ ಕರಾವಳಿಯಲ್ಲಿ ಮುಂಗಾರು ಮಳೆ

ಬೆಂಗಳೂರು: ರಾಜ್ಯದ ಕರಾವಳಿಯಲ್ಲಿ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲವೆಡೆ ಸಾಧಾರಣ ಮಳೆ ಆಗಿದೆ.

ಬಂಟ್ವಾಳ ತಾಲ್ಲೂಕಿನ ಪಾಣೆ ಮಂಗಳೂರು ಮೇಲ್ಕಾರ್‌ನಲ್ಲಿ ಬೃಹತ್‌ ಮರ ಬಿದ್ದು, ಉತ್ತರ ಪ್ರದೇಶದ ಉನ್ನಾವ ಜಿಲ್ಲೆಯ ರಾಮಸೇವಕ (36) ಮೃತಪಟ್ಟಿದ್ದಾರೆ. ದಿಲೀಪ್‌ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರ ಮಧ್ಯಾಹ್ನ ಶೌಚಕ್ಕೆಂದು ಹೊರಟಿದ್ದಾಗ, ಈ ಅವಘಡ ಸಂಭವಿಸಿದೆ.

About the author

ಕನ್ನಡ ಟುಡೆ

Leave a Comment