ರಾಜ್ಯ ಸುದ್ದಿ

ರಾಜ್ಯದ ಸ್ಥಳೀಯ ಸಂಸ್ಥೆ: ಮೀಸಲು ಪಟ್ಟಿ ಹಿಂಪಡೆದ ಸರಕಾರ

ಬೆಂಗಳೂರು: ರಾಜ್ಯದ ನಾನಾ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಹೊರಡಿಸಿದ್ದ ಪರಿಷ್ಕೃತ ಮೀಸಲು ಪಟ್ಟಿಯನ್ನು ಸರಕಾರ ಹಿಂಪಡೆದಿದೆ. ಸರಕಾರದ ನಿಲುವು ಪ್ರಶ್ನಿಸಿ ಮಂಡ್ಯ ಜಿಲ್ಲೆ ನಾಗಮಂಗಲದ ರೂಪಾ ಸಹಿತ ಇನ್ನಿತರರು ದಾಖಲಿಸಿದ್ದ ಅರ್ಜಿಗಳ ಬಗ್ಗೆ ಮಂಗಳವಾರ ವಿಚಾರಣೆ ನಡೆಸಿದ ನ್ಯಾ.ವಿನೀತ್‌ ಕೊಠಾರಿ ಅವರಿದ್ದ ಏಕ ಸದಸ್ಯ ಪೀಠಕ್ಕೆ ಸರಕಾರದ ಅಡ್ವೊಕೇಟ್‌ ಜನರಲ್‌ ಉದಯ್‌ ಹೊಳ್ಳ ಅವರು ಪರಿಷ್ಕೃತ ಪಟ್ಟಿ ಹಿಂಪಡೆಯಲಾಗಿದೆ ಎಂಬ ಮಾಹಿತಿ ನೀಡಿದರು.

ವಿಚಾರಣೆ ವೇಳೆ ಎಜಿ ಅವರು ”ಸೆ.6ರ ಪರಿಷ್ಕೃತ ಆದೇಶವನ್ನು ಹಿಂಪಡೆದು ಮೊದಲು ಹೊರಡಿಸಿದ್ದ ಆದೇಶ(ಸೆ.3)ವನ್ನು ಮುಂದುವರಿಸಲಾಗುವುದು,” ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

About the author

ಕನ್ನಡ ಟುಡೆ

Leave a Comment