ರಾಜಕೀಯ

ರಾಜ್ಯದ 22 ಲೋಕಸಭೆ ಕ್ಷೇತ್ರಗಳಲ್ಲಿ ಗೆಲುವು ಶತಸಿದ್ಧ: ಬಿ.ಎಸ್.ಯಡಿಯೂರಪ್ಪ

ಚಿಕ್ಕಮಗಳೂರು: ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 22 ಲೋಕಸಭೆ ಕ್ಷೇತ್ರಗಳಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಜಿಲ್ಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ಸುದ್ದಿಗೋಷ್ಠಿ ವೇಳೆ ತಿಳಿಸಿದ್ದಾರೆ. ಅಲ್ಲದೆ, ಮಂಡ್ಯದಲ್ಲಿ ಸುಮಲತಾ ಗೆಲ್ಲೋದು ನಿಶ್ಚಿತ ಎಂದೂ ಮಾಜಿ ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದಾಳಿಯಾದ್ರೆ ನಾನು ಜವಾಬ್ದಾರರಲ್ಲ ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ”ಮಾಧ್ಯಮದವರ ಮೇಲೆ ಸಿಎಂ ಇಷ್ಟು ಹಗುರವಾಗಿ ಮಾತನಾಡುವುದು ಸರಿಯಲ್ಲ. ಇದನ್ನ ನಾನು ಖಂಡಿಸುತ್ತೇನೆ. ಈ ಕೂಡಲೇ ಸಿಎಂ ಕ್ಷಮೆ ಕೇಳಬೇಕು” ಎಂದು ಮಾಧ್ಯಮದವರ ಮೇಲಿನ ಹೇಳಿಕೆ ವಿಚಾರಕ್ಕೆ ಕ್ಷಮೆ ಕೇಳುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಇನ್ನು, ”ಮಂಡ್ಯದಲ್ಲಿ ಸುಮಲತಾ ಗೆಲ್ಲೋದು ನಿಶ್ಚಿತ, ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ 2 ಲಕ್ಷ ಮತಗಳ ಅಂತರದಿಂದ ಗೆದ್ದೇ ಗೆಲುತ್ತಾರೆ. ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸೋಲುವ ಬಗ್ಗೆ ಸಿಎಂ ಕುಮಾರಸ್ವಾಮಿಗೆ ಭಯ ಉಂಟಾಗಿದೆ. ಹಾಗಾಗಿ ಮಾಧ್ಯಮದವರ ಮೇಲೆ ಹಗುರವಾಗಿ ಮಾತನಾಡುತ್ತಿದ್ದಾರೆ” ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಬಿಎಸ್ವೈ ಕಿಡಿ ಕಾರಿದ್ದಾರೆ.

ಅಲ್ಲದೆ, ಯಾವ ವಿಷಯಕ್ಕೂ ಸಿಎಂ ಕುಮಾರಸ್ವಾಮಿ ತಲೆಕಡೆಸಿಕೊಳ್ಳಲ್ಲ. ಈ ಹಿನ್ನೆಲೆ ಈ ಲೋಕಸಭಾ ಚುನಾವಣೆ ನಂತರ ಅಪ್ಪ ಮಕ್ಕಳನ್ನ ಮನೆಗೆ ಕಳಿಸುವ ಕೆಲಸ ಜನ ಮಾಡ್ತಾರೆ. ಜತೆಗೆ, ಸಿದ್ದರಾಮಯ್ಯ- ಎಚ್ಡಿಕೆ ಹೆಲಿಕಾಪ್ಟರ್ ನಲ್ಲಿ ಒಟ್ಟಿಗೆ ಓಡಾಡಬಹುದು. ಕೆಳಗೆ ಇಳಿದ ಮೇಲೆ ಅವರಿಬ್ಬರೂ ಒಟ್ಟಿಗೆ ಇರುವುದಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಸೋಲಿಗೆ ಸಿದ್ದರಾಮಯ್ಯ ಸೇಡು ತೀರಿಸಿಕೊಳ್ಳುತ್ತಾರೆ” ಎಂದು ಚಿಕ್ಕಮಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಆರೋಪಿಸಿದ್ದಾರೆ.

About the author

ಕನ್ನಡ ಟುಡೆ

Leave a Comment