ರಾಜ್ಯ ರಾಷ್ಟ್ರ

ರಾಜ್ಯದ 3 ಜಿಲ್ಲೆಗಳು ವಿಶ್ವಪಾರಂಪರಿಕ ಪಟ್ಟಿಗೆ ಶಿಫಾರಸ್ಸು

ರಾಜ್ಯದ ಬೀದರ್, ಗುಲ್ಬರ್ಗ, ವಿಜಯಪುರ ಹಾಗೂ ತೆಲಂಗಾಣದ ಗೋಲ್ಕಂಡ ಜಿಲ್ಲೆಗಳನ್ನು ಶಾಶ್ವತವಾಗಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುವ ಸಂಬಂಧ ಕೈಗೊಂಡಿರುವ ಅಧ್ಯಯನ ಅಂತಿಮ ಹಂತಕ್ಕೆ ತಲುಪಿದ್ದು, ಜೂನ್‌ನಲ್ಲಿ ವರದಿ ಸಲ್ಲಿಸಲು ರಾಜ್ಯ ಪುರಾತತ್ವ ಇಲಾಖೆ ನಿರ್ಧರಿಸಿದೆ.ಈ ತಾಣಗಳು 2014ರಲ್ಲಿ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರಿದ್ದವು.ಇದೀಗ ಶಾಶ್ವತ ಪಟ್ಟಿಗೆ ಸೇರಿಸಲು ಯುನೆಸ್ಕೊದ ನಿಯಮಾವಳಿಗಳ ಪ್ರಕಾರ ಅಧ್ಯಯನ ನಡೆಸಲಾಗುತ್ತಿದೆ, ಇಂಡಿಯನ್ ಹೆರಿಟೇಜ್ ಸಿಟೀಸ್ ನೆಟ್‌ವರ್ಕ್ (IHCN) ತಂಡವು ಅಧ್ಯಯನದ ಜವಾಬ್ದಾರಿ ಹೊತ್ತಿದೆ. ಅದರಂತೆ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಲು ಬೇಕಿರುವ ಮಾನದಂಡಗಳ ಪ್ರಕಾರ ಅಧ್ಯಯನ ನಡೆಸಲಾಗುತ್ತಿದೆ.

14 ಅಂಶಗಳಮಾರ್ಗಸೂಚಿ

ಐತಿಹಾಸಿಕ ಮಹತ್ವ, ಸಾರ್ವತ್ರಿಕ ಮೌಲ್ಯ, ಪಾರಂಪರಿಕ ಪಟ್ಟಿಯಲ್ಲಿ ಸೇರಲು ಇತರೆ ಸ್ಮಾರಕಗಳಿಗಿಂತ ಹೇಗೆ ಭಿನ್ನ ಎಂಬುದು ಸೇರಿದಂತೆ ಯುನೆಸ್ಕೋದ 14 ಅಂಶಗಳ ಅನ್ವಯ ಅಧ್ಯಯನ ನಡೆಸಿ, ವರದಿ ತಯಾರಿಸಲಾಗುತ್ತಿದೆ.

 

About the author

ಕನ್ನಡ ಟುಡೆ

Leave a Comment