ರಾಜ್ಯ ಸುದ್ದಿ

ರಾಜ್ಯದ 95 ತಾಲೂಕುಗಳು ಬರಪೀಡಿತ: ರಬಿ ಬೆಳೆಗೂ ತಟ್ಟಿದ ಬರದ ಬಿಸಿ

ಬೆಂಗಳೂರು: ರಾಜ್ಯದ ಕೃಷಿವಲಯ  ಎರಡೆರಡು ಸಂಕಷ್ಟ ಅನುಭವಿಸುತ್ತಿದೆ, ಈಶಾನ್ಯ ಮಾರುತಗಳು ಸರಿಯಾದ ರೀತಿಯಲ್ಲಿ ಮಳೆ ತರದ ಕಾರಣ, ಬರ ಪರಿಸ್ಥಿತಿ ಮುಂದುವರಿದಿದೆ.
ರಾಜ್ಯದ 156 ತಾಲೂಕುಗಳಲ್ಲಿ 95 ತಾಲೂಕುಗಳನ್ನು ಸರ್ಕಾರ ಬರಪೀಡಿತ ಎಂದು ಘೋಷಿಸಿದೆ, ಈ ತಾಲೂಕುಗಳಲ್ಲಿ ತೀವ್ರ ಪ್ರಮಾಣದ ಬರ ತಾಂಡವವಾಡುತ್ತಿದೆ. ಕರ್ನಾಟಕದಲ್ಲಿ ಹಿಂದೆಂದೂ ಕಾಣದ ಬರ ಪರಿಸ್ಥಿತಿ ಎದುರಾಗಿದೆ, ರಾಜ್ಯಾದ್ಯಂತ ಬರ ಪರಿಸ್ಥಿತಿ ಇದೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ ತಿಳಿಸಿದ್ದಾರೆ. ಬರದ ಜೊತೆಗೆ ಪ್ರವಾಹ ಕೂಡ ರಾಜ್ಯದಲ್ಲಿ ಹಲವು ರೀತಿಯ ನಷ್ಟ ತಂದಿದೆ, ಈ ವರ್ಷದಲ್ಲಿ ಖಾರಿಫ್ ಮತ್ತು ರಬಿ ಎರಡು ಬೆಳೆಗೂ ಬರ ಎದುರಾಗಿದೆ,ಹಿಂದೆಂದೂ ಈ ರೀತಿಯ ಬರ ಸಂಭವಿಸಿರಲಿಲ್ಲ, ಇದು ರಾಜ್ಯದ ಸಂಪೂರ್ಣ ಅರ್ಥ ವ್ಯವಸ್ಥೆಯ ಮೇಲೆ ಪರಿಣಾಮ ಬಿರಲಿದೆ ಎಂದು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment