ರಾಜಕೀಯ

ರಾಜ್ಯಸಭೆ ಚುನಾವಣೆ: ಅಧಿಕಾರಿಗಳ ವಿರುದ್ಧ ಎಚ್​ಡಿಕೆ ಆಕ್ಷೇಪ

ಬೆಂಗಳೂರು: ರಾಜ್ಯಸಭೆ ಮತದಾನದ ವೇಳೆ ಕಾಂಗ್ರೆಸ್​ ಶಾಸಕರಿಗೆ ಎರಡು ಬಾರಿ ಬ್ಯಾಲೆಟ್​ ಪೇಪರ್​ ನೀಡಿದ ಕ್ರಮವನ್ನು ವಿರೋಧಿಸಿ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಮತಗಟ್ಟೆ ಅಧಿಕಾರಿಗಳ ವಿರುದ್ಧ ಕೂಗಾಡಿದ ಘಟನೆ ನಡೆದಿದೆ.

ಕಾಗೋಡು ತಿಮ್ಮಪ್ಪ ಮತ್ತು ಬಾಬುರಾವ್​ ಚಿಂಚನಸೂರ್​ ಅವರು ತಪ್ಪಾಗಿ ಮತ ಚಲಾಯಿಸಿದ ಹಿನ್ನೆಲೆಯಲ್ಲಿ ಎರಡನೇ ಮತಪತ್ರ ಪಡೆದು ಮತ್ತೊಮ್ಮೆ ಮತ ಚಲಾಯಿಸಿದ್ದರು. ಮತಗಟ್ಟೆ ಅಧಿಕಾರಿಗಳ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕುಮಾರಸ್ವಾಮಿ ರಾಜ್ಯಸಭಾ ಚುನಾವಣೆ ನಿಯಮಾವಳಿ 39AA ಪ್ರಕಾರ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

ಮತದಾನ ಬಹಿಷ್ಕರಿಸುವ ಕುರಿತು ಚರ್ಚೆ ನಡೆಸಲು ಕುಮಾರಸ್ವಾಮಿ ಅವರು ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದಾರೆ. ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುವವರೆಗೆ ಮತದಾನ ಮಾಡದಂತೆ ಜೆಡಿಎಸ್​ ಶಾಸಕರಿಗೆ ಎಚ್​ಡಿಕೆ ಸೂಚನೆ ನೀಡಿದ್ದಾರೆ.

ಆರಂಭದಲ್ಲಿ ಎಚ್​.ಡಿ. ರೇವಣ್ಣ ಚುನಾವಣಾ ಅಧಿಕಾರಿಯ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

 

About the author

ಕನ್ನಡ ಟುಡೆ

Leave a Comment