ರಾಜಕೀಯ ಸಿನಿ ಸಮಾಚಾರ

ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಾರಾ ನಟ ಉಪೇಂದ್ರ

ಈಗಾಗಲೇ ರಾಜಕೀಯಕ್ಕೆ ಧುಮುಕಿದ್ದು, ಸ್ವಂತ ಪಕ್ಷವನ್ನು ಕೂಡ ಕಟ್ಟಿದ್ದಾರೆ. ಆದ್ರೆ ಈ ಬಾರಿ ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಾರಾ ಎಂಬ ಬಗ್ಗೆ ಹಲವು ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿದ್ದು, ಈ ಬಗ್ಗೆ ಉಪೇಂದ್ರ ತಾಯಿ ಅನುಸೂಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.ಈ ಬಾರಿ ಉಪೇಂದ್ರ ಚುನಾವಣೆಗೆ ಬರೋದು ಅನುಮಾನ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಡೌಟ್. ಆದ್ರೆ ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಅನುಸೂಯ ಅವರು ತಿಳಿಸಿದರು. ಪ್ರಜಾಕೀಯ ರಿಜಿಸ್ಟ್ರೇಷನ್ ಆಗಿದ್ದು, ಇದರ ಪ್ರಚಾರಕ್ಕೆ ಸಮಯ ಇಲ್ಲ. ಸದ್ಯ ಉಪೇಂದ್ರ ಹೋಮ್ ಮಿನಿಸ್ಟರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಉಪೇಂದ್ರ ಅವರ ತಾಯಿ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

About the author

ಕನ್ನಡ ಟುಡೆ

Leave a Comment