ರಾಜಕೀಯ ರಾಷ್ಟ್ರ

ರಾಜ್ಯ ಸಭೆಗೆ ಪಟೇಲ್, ಅಮಿತ್ ಶಾ , ಇರಾನಿ

ನವದೆಹಲಿ: ಗುಜರಾತ್‌‌ನಲ್ಲಿ ರಾಜ್ಯಸಭೆ ಚುನಾವಣೆ ಪೂರ್ವ, ಮತದಾನದ ಸಂದರ್ಭದಲ್ಲಿ ನಡೆದ ಹೈಡ್ರಾಮಾದಷ್ಟೇ ಮತ ಎಣಿಕೆ ವೇಳೆಯೂ ಭಾರಿ ಹೈಡ್ರಾಮಾ ನಡೆದಿದೆ. ಅಡ್ಡ ಮತದಾನದ ಕಾರಣದಿಂದಾಗಿ ಸಂಜೆ ನಡೆಯಬೇಕಿದ್ದ ಮತ ಎಣಿಕೆ ಕಾರ್ಯ ತಡರಾತ್ರಿ ನಡೆದಿದೆ.
ಬಿಜೆಪಿ ಮತ್ತು ಕಾಂಗ್ರೆಸ್‌ ಪ್ರತಿಷ್ಠೆಯಾಗಿ ಪರಿಣಮಿಸಿದ್ದ ರಾಜ್ಯಸಭೆಯ ಮೂರು ಸ್ಥಾನಗಳಿಗೆ ಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಎರಡು ಸ್ಥಾನಗಳಲ್ಲಿ ಜಯಗಳಿಸಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ಭಾರಿ ಪೈಪೋಟಿ ಕಾರಣವಾಗಿದ್ದ ಮೂರನೇ ಸ್ಥಾನವನ್ನು ಕಾಂಗ್ರೆಸ್‌ ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಈ ಮೂಲಕ ಕಾಂಗ್ರೆಸ್‌‌ ನಿಟ್ಟುಸಿರು ಬಿಟ್ಟಿದೆ.
ಕಾಂಗ್ರೆಸ್‌ ಅಭ್ಯರ್ಥಿ, ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹಮದ್‌ ಪಟೇಲ್‌ 44 ಮತಗಳನ್ನು ಪಡೆದು ಗೆಲುವು ದಾಖಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗಳಾದ ಅಮಿತ್‌ ಶಾ, ಸ್ಮೃತಿ ಇರಾನಿ ತಲಾ 46 ಮತಗಳನ್ನು ಪಡೆದು ಜಯ ಸಾಧಿಸಿದ್ದಾರೆ.
ಕಾಂಗ್ರೆಸ್‌ನ ಇಬ್ಬರು ಶಾಸಕರು ಬಿಜೆಪಿಗೆ ಮತ ಹಾಕಿದ್ದೇವೆ ಎಂದು ಬಹಿರಂಗವಾಗಿ ಘೋಷಿಸಿದ್ದರು. ಇದರಿಂದ ಕಾಂಗ್ರೆಸ್‌‌ ಅಭ್ಯರ್ಥಿ ಪಟೇಲ್‌ ಸೋಲು ಖಚಿತ ಅಂತಾನೆ ಹೇಳಲಾಗಿತ್ತು. ಹೀಗಾಗಿ ಕಾಂಗ್ರೆಸ್‌ ಈ ಇಬ್ಬರು ಶಾಸಕರ ಮತಗಳನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಇದರಿಂದ ಮತ ಎಣಿಕೆ ಕಾರ್ಯದಲ್ಲಿ ತೀವ್ರ ವಿಳಂಬ ಉಂಟಾಗಿತ್ತು.

About the author

ಕನ್ನಡ ಟುಡೆ

Leave a Comment