ರಾಜ್ಯ ಸುದ್ದಿ

ರಾಜ್ಯ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಸಂಬಳ ಹೆಚ್ಚಿಸಲು ಸರ್ಕಾರ ನಿರ್ಧಾರ

ಬೆಂಗಳೂರು: ಕೊನೆಗೂ 6ನೇ ವೇತನ ಆಯೋಗದ ವರದಿ ಮಂಡನೆಗೆ ಸರ್ಕಾರ‌‌ ನಿರ್ಧಾರಿಸಿದ್ದು, ರಾಜ್ಯ ಸರ್ಕಾರಿ ನೌಕರರಿಗೆ ಖುಷಿ ನೀಡಿದೆ. ಅಕ್ಟೋಬರ್ 4ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಕೊನೆಗೂ ವರದಿ ಮಂಡಿಸಲು ಸರ್ಕಾರ ಚಿಂತನೆ ನಡೆಸಿದೆ. ಅಕ್ಟೋಬರ್ 4ರಂದು ವಿಧಾನಸೌಧದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಡಾ. ಎಂ. ಆರ್. ಶ್ರೀನಿವಾಸ್ ಮೂರ್ತಿ ಅಧ್ಯಕ್ಷತೆಯಲ್ಲಿ ಆರನೇ ವೇತನ ಆಯೋಗದ ವರದಿ ಮಂಡನೆಯಾಗಲಿದ್ದು, ಈಗಾಗಲೇ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ವಿಧಾನಸಭೆ ಚುನಾವಣೆಗೆ ಮೊದಲೇ ಈ ವರದಿ ಸಲ್ಲಿಕೆಯಾಗಿತ್ತಾದರೂ ಚುನಾವಣೆ ನೀತಿ ಸಂಹಿತೆಯಿಂದ ಹಾಗೆಯೇ ಉಳಿದುಕೊಂಡಿತ್ತು. ಇದೀಗ ವರದಿ ಮಂಡನೆಗೆ ರಾಜ್ಯ ಸರ್ಕಾರ ಆಸಕ್ತಿ ತೋರಿದೆ.

ಆಯೋಗ ಮಾಡಿರುವ ಸಲಹೆಗಳ ಮೇಲೆ ಸರ್ಕಾರದ ಮುಂದಿನ ನಿರ್ಧಾರ ಕೈಗೊಳ್ಳಲಿದ್ದು, ಸದ್ಯ ಆಯೋಗದ ವರದಿ ಕುರಿತು ಸರ್ಕಾರದ ಮುಂದಿನ ನಡೆ ಏನಾಗುತ್ತದೆ ಎಂಬುವುದೇ ಕುತೂಹಲ ಮೂಡಿಸಿದೆ.

About the author

ಕನ್ನಡ ಟುಡೆ

Leave a Comment