ರಾಷ್ಟ್ರ ಸುದ್ದಿ

ಪ್ರಧಾನಿ ತಾಯಿ ಹೆಸರೇಳಿ ರಾಜ್‌ ಬಬ್ಬರ್‌ ವಿವಾದಾತ್ಮಕ ಹೇಳಿಕೆ

ಇಂದೋರ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ಹೆಸರನ್ನು ರುಪಾಯಿ ಮೌಲ್ಯಕ್ಕೆ ಹೋಲಿಸಿ, ಕಾಂಗ್ರೆಸ್‌ ಸಂಸದ ರಾಜ್‌ ಬಬ್ಬರ್‌ ಹೇಳಿಕೆ ನೀಡಿದ್ದಾರೆ. ಮಧ್ಯಪ್ರದೇಶದ ಚುನಾವಣಾ ಪ್ರಚಾರದ ಸಭೆಯಲ್ಲಿ ನೀಡಿದ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ಅವರು ರೂಪಾಯಿ ಮೌಲ್ಯ ಕುಸಿದು ಮನಮೋಹನ್‌ ಸಿಂಗ್‌ ವಯಸ್ಸಿನ ಸನಿಹಕ್ಕೆ ತಲುಪಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ಇಂದು ತಮ್ಮ ಪ್ರೀತಿಯ ತಾಯಿಯ ವಯಸ್ಸಿಗೆ ರೂಪಾಯಿ ಮೌಲ್ಯ ಸನಿಹವಾಗಿದೆ ಎಂದು ರಾಜ್‌ ಬಬ್ಬರ್‌ ಹೇಳಿಕೆ ನೀಡಿದ್ದಾರೆ. ಮೋದಿ ಅವರ ತಾಯಿಗೆ ಹೀರಾಬೆನ್ ಅವರಿಗೆ 97 ವರ್ಷ ವಯಸ್ಸಾಗಿದೆ.

ಕಾಂಗ್ರೆಸ್‌ ಎಂದಿಗೂ ರಾಮ ಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಪ್ರಧಾನಿ ಮೋದಿ ಈಗ ಮುಸಲ್ಮಾನರೂ ಸಹ ಮಂದಿರ ನಿರ್ಮಾಣಕ್ಕೆ ಸಹಮತಿ ವ್ಯಕ್ತಪಡಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಸುಪ್ರೀಂ ಕೋರ್ಟ್‌ ಈ ನಿಟ್ಟಿನಲ್ಲಿ ತನ್ನ ಆದೇಶ ಪ್ರಕಟಿಸಲಿದೆ ಎಂದು ಹೇಳಿದ್ದಾರೆ.

ಬಿಜೆಪಿ ಎಂದಿಗೂ ರಾಮನ ಮೇಲೆ ಅಪಾರ ಭಕ್ತಿ ಇಟ್ಟ ಪಕ್ಷ ಅಲ್ಲವೇ ಅಲ್ಲ. ಆದರೆ ಚುನಾವಣೆಯ ವೇಳೆ ಮಾತ್ರ ರಾಮನ ನೆನಪಾಗುತ್ತದೆ. ರಾಮನ ಹೆಸರು ಹೇಳುವ ಮೂಲಕ ಮತ ಯಾಚಿಸುತ್ತದೆ. ಜನರಿಗೂ ಈ ಸತ್ಯ ಗೊತ್ತಾಗುತ್ತಿದೆ. ಪ್ರತಿ ಬಾರಿಯೂ ರಾಮ ಮಂದಿರ ನಿರ್ಮಿಸುವುದಾಗಿ ಹೇಳುವ ಬಿಜೆಪಿ, ಈವರೆಗೆ ಯಾವಾಗ ನಿರ್ಮಿಸುತ್ತದೆ ಎಂದು ಹೇಳಿಲ್ಲ ಎಂದು ಟೀಕಿಸಿದ್ದಾರೆ.

About the author

ಕನ್ನಡ ಟುಡೆ

Leave a Comment