ದೇಶ ವಿದೇಶ ಸುದ್ದಿ

ರಾಣಿ ಚೆನ್ನಮ್ಮಳ ಕತ್ತಿ ಮರಳಿ ಭಾರತಕ್ಕೆ

ವಿಜಯಪುರ: ಕರುನಾಡಿನ ಹೆಮ್ಮೆಯ ರಾಣಿ ಚೆನ್ನಮ್ಮ ಬಳಸಿದ ಖಡ್ಗ ಇಂದಿಗೂ ಇಂಗ್ಲೆಂಡಿನ ಪಾರ್ಲಿಮೆಂಟಿನಲ್ಲಿದೆ.

ನಾಡಿನ ಹೆಮ್ಮೆಯ, ಸ್ವಾಭಿಮಾನದ ಪ್ರತೀಕವಾದ ರಾಣಿ ಚನ್ನಮ್ಮಳ ಖಡ್ಗವನ್ನು ಮುಂಬರುವ ಅಕ್ಟೋಬರ್ 23ರ ಒಳಗೆ ಇಂಗ್ಲೆಂಡಿನಿಂದ ಮರಳಿ ಭಾರತಕ್ಕೆ ತರಲಾಗುವುದು.

ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು. ಆ ಮೂಲಕ ಕಿತ್ತೂರು ರಾಣಿ ಚನ್ನಮ್ಮ ಅವರು ಬಳಸಿದ ಖಡ್ಗವನ್ನು ಮರಳಿ ಭಾರತಕ್ಕೆ ತರಲಾಗುವುದು ಎಂದು ಕೂಡಲ ಸಂಗಮದ ಪಂಚಮಸಾಲಿ ಗುರುಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಹಮಗಳಿಗೆ ಪ್ರತಿಕ್ರಿಯಿಸಿದ ಅವರು ಕಿತ್ತೂರು ರಾಣಿ ಚೆನ್ನಮ್ಮಳ ಖಡ್ಗದ ಬಗ್ಗೆ ಈಗಾಗಲೇ ಮಾಹಿತಿ ಕಲೆ ಹಾಕಲಾಗಿದೆ. ಸರ್ಕಾರಕ್ಕೆ ಸೂಕ್ತ ಮಾಹಿತಿ ನೀಡಿ ಶೀಘ್ರದಲ್ಲೇ ಚೆನ್ನಮ್ಮಳ ಖಡ್ಗ ನಾಡಿಗೆ ಮರಳಿ ತರಲಾಗುವುದು ಎಂದು ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

About the author

ಕನ್ನಡ ಟುಡೆ

Leave a Comment