ಸಿನಿ ಸಮಾಚಾರ

ರಾತ್ರೋರಾತ್ರಿ ಮಂಡ್ಯದಲ್ಲಿರೋ ಮನೆ ಖಾಲಿ ಮಾಡಿದ ನಟಿ ರಮ್ಯಾ

ಮಂಡ್ಯ: ಮಾಜಿ ಸಂಸದೆ ಹಾಗೂ ನಟಿ ರಮ್ಯಾ ರಾತ್ರೋರಾತ್ರಿ  ಮಂಡ್ಯದಲ್ಲಿದ್ದ ತಮ್ಮ ಮನೆಯನ್ನು ಖಾಲಿ ಮಾಡಿದ್ದಾರೆ. ರಮ್ಯಾ ಅವರ ಮನೆ ಮಂಡ್ಯ ನಗರದ ವಿದ್ಯಾನಗರದಲ್ಲಿದ್ದು, ಭಾನುವಾರ ತಡರಾತ್ರಿ ಎರಡು ಲಾರಿಗಳಲ್ಲಿ ಮನೆಯಲ್ಲಿದ್ದ ವಸ್ತುಗಳನ್ನು ಸಾಗಣೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸುಮಾರು ರಾತ್ರಿ ಹತ್ತು ಗಂಟೆಯಿಂದ ಮಧ್ಯರಾತ್ರಿ ಎರಡು ಗಂಟೆವರೆಗೆ ಮನೆಯಲ್ಲಿದ್ದ ವಸ್ತುಗಳನ್ನು ತುಂಬಿಕೊಂಡು ಹೋಗಿದ್ದಾರೆ. ಈ ವೇಳೆ ರಮ್ಯಾ ಮನೆಮುಂದೆ ಐದಾರು ಪೊಲೀಸರಿಂದ ಬಿಗಿ ಬಂದೋಬಸ್ತ್​ ಏರ್ಪಡಿಸಲಾಗಿತ್ತು. ರಾತ್ರೋರಾತ್ರಿ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದರಿಂದ ರಮ್ಯಾ ಮನೆ ಖಾಲಿ ‌ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ನಟ ಹಾಗೂ ಮಾಜಿ ಸಚಿವ ಅಂಬರೀಷ್​ ಮೃತಪಟ್ಟಾಗ ರಮ್ಯಾ ಹಾಜರಾಗದೇ ಇದ್ದದ್ದು. ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

About the author

ಕನ್ನಡ ಟುಡೆ

Leave a Comment