ರಾಷ್ಟ್ರ ಸುದ್ದಿ

ರಾಫೆಲ್ ವಿವಾದ: ಪ್ರಧಾನಿ ಮೋದಿ ಪರ ನಿಂತ ಶರದ್ ಪವಾರ್, ಎನ್‍ಸಿಪಿ ತೊರೆದ ತಾರಿಖ್ ಅನ್ವರ್

ನವದೆಹಲಿ: ಕಾಂಗ್ರೆಸ್-ಮಹಾಘಟಬಂಧನದ ಜೊತೆಗೆ ಗುರುತಿಸಿಕೊಂಡಿದ್ದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಎನ್‍ಸಿಪಿ) ಮುಖ್ಯಸ್ಥ ಶರದ್ ಪವಾರ್ ರಾಫೆಲ್ ಒಪ್ಪಂದದ ಕುರಿತು ಪ್ರಧಾನಿ ನರೇಂದ್ರ ಮೋದಿ ಪರ ನಿಂತಿದ್ದು ಇದರಿಂದ ಆಕ್ರೋಶಗೊಂಡಿರುವ ತಾರಿಖ್ ಅನ್ವರ್ ಎನ್‍ಸಿಪಿ ತೊರೆದಿದ್ದಾರೆ.
ರಫೆಲ್ ಅಸ್ತ್ರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮೋದಿ ಸರ್ಕಾರವನ್ನು ಜರಿಯುತ್ತಿದ್ದರೆ ಇತ್ತ ಶರದ್ ಪವಾರ್ ಮಾತ್ರ ಮೋದಿ ಸರ್ಕಾರವನ್ನು ಹೊಗಳಿಸಿದ್ದರು. ಇದರಿಂದ ಬೇಸರಗೊಂಡಿರುವ ಎನ್‍ಸಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಾರಿಖ್ ಅನ್ವರ್ ಪಕ್ಷದ ಎಲ್ಲಾ ಹುದ್ದೆಗಳಿಗೂ ರಾಜಿನಾಮೆ ನೀಡಿದ್ದಾರೆ. ಶರತ್ ಪವಾರ್ “ಪ್ರಧಾನಿ ನರೇಂದ್ರ ಮೋದಿ ಉದ್ದೇಶಗಳ ಬಗ್ಗೆ ಜನರಿಗೆ ಅನುಮಾನಗಳಿಲ್ಲ” ಆದರೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕರಣದಲ್ಲಿ ನಡೆದುಕೊಂಡ ರೀತಿ ಜನರಲ್ಲಿ ಗೊಂದಲ ಉಂಟು ಮಾಡಿತ್ತು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಮರಾಠಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದ ಮಾಜಿ ರಕ್ಷಣಾ ಸಚಿವ ಶರತ್ ಪವಾರ್,  ರಾಫೆಲ್ ವಿಮಾನಗಳ ತಾಂತ್ರಿಕ ವಿವರಗಳನ್ನು ಕೇಳುತ್ತಿರುವ ವಿಪಕ್ಷಗಳ ಬೇಡಿಕೆ ಸೂಕ್ತವಾಗಿಲ್ಲ. ಆದರೆ ರಾಫೆಲ್ ವಿಮಾನಗಳ ಬೆಲೆಯನ್ನು ಬಹಿರಂಗಗೊಳಿಸುವುದರಲ್ಲಿ ಸರ್ಕಾರಕ್ಕೆ ಯಾವುದೇ ಸಮಸ್ಯೆಯೂ ಇಲ್ಲ ಎಂದು ಶರತ್ ಪವಾರ್ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment