ರಾಷ್ಟ್ರ ಸುದ್ದಿ

ಸುಪ್ರೀಂ ಕೋರ್ಟ್‌ ತೀರ್ಪು ವಿಳಂಬವಾಗುವ ಸಾಧ್ಯತೆ, ರಾಮಮಂದಿರಕ್ಕಾಗಿ ಸುಗ್ರೀವಾಜ್ಞೆ: ಪೇಜಾವರ ಶ್ರೀ ಒತ್ತಾಯ

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ ತೀರ್ಪು ವಿಳಂಬವಾಗುವ ಸಾಧ್ಯತೆ ಇರುವುದರಿಂದ ಕೇಂದ್ರ ಸರಕಾರ ಸುಗ್ರೀವಾಜ್ಞೆ ಹೊರಡಿಸಿ ರಾಮ ಮಂದಿರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮಿಜಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು,”ಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರ ಕೇಂದ್ರ ಸರಕಾರಕ್ಕೆ ಇದೆ. ಈ ಸಂಬಂಧ ಸಾಧು ಸಂತರ ನಿಯೋಗವೊಂದು ಈಗಾಗಲೇ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆ. ಪ್ರಧಾನಿ ಭೇಟಿ ಮಾಡಲು ಸ್ವಾಮೀಜಿಗಳ ನಿಯೋಗ ನಿರ್ಧರಿಸಿದರೆ ನಾನೂ ಹೋಗುವೆ,” ಎಂದು ತಿಳಿಸಿದರು. ”ಸರಕಾರ ಸುಗ್ರೀವಾಜ್ಞೆ ಹೊರಡಿಸಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಮೋದನೆ ಪಡೆದು ಶೀಘ್ರವೇ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕೆಂಬುದು ನಮ್ಮ ಅಭಿಲಾಷೆ,” ಎಂದರು.

ಮಹಿಳೆಯರಿಗೂ ಪ್ರವೇಶವಿರಬೇಕು; ಶಬರಿಮಲೆ ವಿವಾದ ಕುರಿತ ಪ್ರಶ್ನೆಗೆ, ”ಶಬರಿಮಲೆ ದೇವಸ್ಥಾನದಲ್ಲೂ ಮಹಿಳೆಯರಿಗೆ ಪ್ರವೇಶವಿರಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ,” ಎಂದರು. ”ಶಬರಿಮಲೆಯ ದೇವಸ್ಥಾನದ ಸಂಪ್ರದಾಯದಲ್ಲಿ ಮಹಿಳೆಯರಿಗೆ ನಿಷೇಧವಿದೆ. ಈ ವಿವಾದ ಕುರಿತು ನಾನು ತಟಸ್ಥ ಧೋರಣೆ ಅನುಸರಿಸುವೆ. ಏಕೆಂದರೆ, ಒಂದೆಡೆ ಸುಪ್ರೀಂ ಕೋರ್ಟ್‌ನ ತೀರ್ಪು, ಇನ್ನೊಂದೆಡೆ ಸಂಪ್ರದಾಯ, ನಂಬಿಕೆಗಳಿವೆ,” ಎಂದರು.

About the author

ಕನ್ನಡ ಟುಡೆ

Leave a Comment