ರಾಷ್ಟ್ರ

ರಾಮಸೇತುಗೆ ಹಾನಿ ಮಾಡುವುದಿಲ್ಲ ಸುಪ್ರೀಂ ಕೋರ್ಟ್ ಗೆ ಕೇಂದ್ರದಿಂದ ವರದಿ

ನವದೆಹಲಿ: ಸೇತುಸಮುದ್ರಂ ಯೋಜನೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ಸಲ್ಲಿಸಿದ್ದ ಪಿಐಎಲ್ ಗೆ ಕೇಂದ್ರ ನೌಕಾ ಸಾರಿಗೆ ಇಲಾಖೆ ಸುಪ್ರೀಂ ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದ್ದು ರಾಮಸೇತುವನ್ನು ಒಡೆಯುವುದಿಲ್ಲ ಎಂದು ಹೇಳಿದೆ.

“ರಾಮಸೇತುವಿಗೆ ಹಾನಿ ಮಾಡದೇ ರಾಷ್ಟ್ರದ ಹಿತದೃಷ್ಟಿಯಿಂದ ಸೇತುಸಮುದ್ರಂ ಯೋಜನೆಗೆ ಪರ್ಯಾಯ ಮಾರ್ಗ ಹುಡುಕುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದು ಕೇಂದ್ರ ನೌಕಾ ಸಾರಿಗೆ ಇಲಾಖೆ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಿಳಿಸಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್ ಕೇಂದ್ರ ಸರ್ಕಾರದ ಪರವಾಗಿ ಸುಪ್ರೀಂ ಕೋರ್ಟ್ ನ ಲ್ಲಿ ಅಫಿಡವಿಟ್ ಸಲ್ಲಿಸಿದ್ದಾರೆ.

ಪಿಐಎಲ್ ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿರುವುದರಿಂದ ಪಿಐಎಲ್ ನ್ನು ಈಗ ಇತ್ಯರ್ಥಗೊಳಿಸಬಹುದಾಗಿದೆ. ಸೇತುಸಮುದ್ರಂ ಯೋಜನೆಯಿಂದ ಪುರಾಣ ಪ್ರಸಿದ್ಧ ರಾಮಸೇತುವಿಗೆ ಹಾನಿಯುಂಟಾಗಲಿದೆ ಎಂದು ಸುಬ್ರಹ್ಮಣಿಯನ್ ಸ್ವಾಮಿ ಸುಪ್ರೀಂ ಕೋರ್ಟ್ ನಲ್ಲಿ ವಾದಿಸಿದ್ದರು ಎಂದು ತಿಳಿದುಬಂದಿದೆ.

 

About the author

ಕನ್ನಡ ಟುಡೆ

Leave a Comment