ರಾಷ್ಟ್ರ ಸುದ್ದಿ

ಅಯೋಧ್ಯೆಯಲ್ಲಿಯೇ ರಾಮ ಮಂದಿರ ನಿರ್ಮಾಣಕ್ಕೆ ಮೋದಿ ಸರ್ಕಾರ ಧೈರ್ಯ ತೋರಬೇಕು: ಶಿವಸೇನೆ

ಮುಂಬೈ: ವಿವಾದಿತ ಸ್ಥಳ ಅಯೋಧ್ಯೆಯಲ್ಲಿಯೇ ರಾಮಮಂದಿರ ನಿರ್ಮಾಣ ಆಗಬೇಕು ಈ ನಿಟ್ಟಿನಲ್ಲಿ  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಧೈರ್ಯ ತೋರಬೇಕು ಎಂದು ಎನ್ ಡಿಎ ಅಂಗಪಕ್ಷ ಶಿವಸೇನಾ ಹೇಳಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಂರು ಒಪ್ಪಿಗೆ ಸೂಚಿಸಿದ್ದರೆ, ವೋಟ್  ಬ್ಯಾಂಕ್ ರಾಜಕಾರಣ ಅಂತ್ಯಗೊಳ್ಳಲಿದೆ ಎಂದು ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಬರೆದಿರುವ ಲೇಖನದಲ್ಲಿ  ರಾಜ್ಯಸಭಾ ಸಂಸದ ಸಂಜಯ್ ರಾವತ್  ತಿಳಿಸಿದ್ದಾರೆ.ರಾಮಜನ್ಮಭೂಮಿ- ಬಾಬ್ರಿ ಮಸೀದಿ  ವಿವಾದ  ಪ್ರಕರಣ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದರೆ ಹಿಂಸಾಚಾರ ಭುಗಿಲೆಳಲಿದೆ ಎಂಬುದು ತಪ್ಪುಗ್ರಹಿಕೆಯಾಗಿದ್ದು,  ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಮಂದಿರ ನಿರ್ಮಾಣ ಕಾರ್ಯವನ್ನು ನರೇಂದ್ರ ಮೋದಿ ಸರ್ಕಾರ ಕೈಗೊಳ್ಳಬೇಕು, ಈ ನಿಟ್ಟಿನಲ್ಲಿ ಧೈರ್ಯ ತೋರಬೇಕು ಎಂದು ಸಾಮ್ನಾ ಕಾರ್ಯಾಕಾರಿ ಸಂಪಾದಕರೂ ಆಗಿರುವ ಸಂಜಯ್ ರಾವತ್ ತಿಳಿಸಿದ್ದಾರೆ.ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಕೇಸರಿ ಪಡೆ ಆಯೋಧ್ಯ ಕಾರ್ಡ್ ಬಳಸುವ ಸಾಧ್ಯತೆ ಎಂಬ ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಸ್ವಾಮಿ ಅವರ ಹೇಳಿಕೆ ಉಲ್ಲೇಖಿಸಿರುವ ಸಂಜಯ್ ರಾವತ್ , ಮಂದಿರ ನಿರ್ಮಾಣ ಸೂಕ್ಷ್ಮ ಹಾಗೂ ಪ್ರಮುಖ ವಿಚಾರವಾಗಿದ್ದು, 2019ಕ್ಕಿಂತಲೂ ಮುಂಚಿತವಾಗಿ ಭಾರತೀಯ ಮುಸ್ಲಿಂರು  ಬಾಬ್ರಿ ಮಸೀದಿ ವಿವಾದಕ್ಕೆ ಅಂತ್ಯವಾಡಲು ನಿರ್ಧರಿಸಿದ್ದರೆ,  ಭಾರತಕ್ಕೆ ಹೊಸ ಬೆಳಕು ಮೂಡಿದಂತಾಗುತ್ತದೆ ಎಂದಿದ್ದಾರೆ.

About the author

ಕನ್ನಡ ಟುಡೆ

Leave a Comment