ರಾಷ್ಟ್ರ ಸುದ್ದಿ

ರಾಮ ಮಂದಿರ ನಿರ್ಮಾಣವಾಗದಿದ್ದರೆ, ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲಾಗುತ್ತದೆ: ಶಿವಸೇನೆ

ಮುಂಬೈ: ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಶಿವಸೇನೆ,  ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡದಿದ್ದರೆ, ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲಾಗುತ್ತದೆ ಎಂದು ಮಂಗಳವಾರ ಎಚ್ಚರಿಸಿದೆ.
ಈ ಕುರಿತಂತೆ ತನ್ನ ಮುಖಪುಟ ಸಾಮ್ನಾದಲ್ಲಿ ಬರೆದುಕೊಂಡಿರುವ ಶಿವಸೇನೆಯು, ರಾಮ ಮಂದಿನ ನಿರ್ಮಾಣ ವಿವಾದವನ್ನು ಕೇವಲ ಮತದಾನ ಭರವಸೆಗೆ ಮಾತ್ರ ಬಳಕೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಹಿಂದುತ್ವ ಹಾಸ್ಯಸ್ಪದ ವಿಚಾರವಾಗಿ ಹೋಗಿದೆ. ಶೀಘ್ರಗತಿಯಲ್ಲಿ ರಾಮ ಮಂದಿನ ನಿರ್ಮಿಸಿ, ಇಲ್ಲದಿದ್ದರೆ, ರಾಮ್ ನಾಮ್ ಸತ್ಯ ಹೇ ಎಂದು ಹೇಳಿದೆ. ಉತ್ತರ ಪ್ರದೇಶಗ ಹಾಗೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಖಚಿತ ಎಂದು ನಂಬಿದ್ದೆವು. ಆದರೆ, ಆದಾವುದೂ ಆಗಲೇ ಇಲ್ಲ. ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿಯಾಗಲೀ ಅಥವಾ ಹಿಂದೂತ್ವದ ಜನತೆಯಾಗಲೀ ರಾಮ ಮಂದಿರ ನಿರ್ಮಾಣ ಕುರಿತು ಒಂದು ಸಣ್ಣ ಮಾತನ್ನೂ ಆಡುತ್ತಿಲ್ಲ. ದೇಗು ವಿಚಾರ ಚುನಾವಣಾ ಪ್ರಚಾರ ವಿಚಾರವಾಗಿ ಹೋಗಿದೆ ಎಂದು ತಿಳಿಸಿದೆ.
ರಾಮ ಮಂದಿರ ನಿರ್ಮಾಣಕ್ಕೆ ದನಿ ಎತ್ತುತ್ತಿರುವವರಿಗೆ ಸರ್ಕಾರ ಸಮಸ್ಯೆಯನ್ನು ನೀಡುತ್ತಿದೆ. ರಾಮ ಮಂದಿರ ವಿಚಾರವನ್ನು ಮೋದಿ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿಕೊಂಡಿದೆ.

About the author

ಕನ್ನಡ ಟುಡೆ

Leave a Comment