ರಾಷ್ಟ್ರ ಸುದ್ದಿ

ರಾಯಪುರ: ಮೂವರು ನಕ್ಸಲೀಯರನ್ನು ಹತ್ಯೆಗೈದ ಭದ್ರತಾ ಪಡೆಗಳು

ರಾಯಪುರ: ಛತ್ತೀಸ್ ಗಡದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ನಕ್ಸಲೀಯರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರನ್ನು ನಕ್ಸಲೀಯರನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಿರ್ತೂರು ಠಾಣೆ ವ್ಯಾಪ್ತಿಯ ಮಾದಪಾಲ್ ಗ್ರಾಮದ ಬಳಿ ಇಂದು ಬೆಳ್ಳಿಗೆ 9-30 ರ ಸುಮಾರಿನಲ್ಲಿ ಜಿಲ್ಲಾ ಮೀಸಲು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೂವರು ನಕ್ಸಲೀಯರನ್ನು ಹತ್ಯೆಗೈದಿದ್ದಾರೆ ಎಂದು ಬಿಜಾಪುರ ಪೊಲೀಸ್ ವರಿಷ್ಠಾಧಿಕಾರಿ ಮೊಹಿತ್ ಗಾರ್ಗ್ ತಿಳಿಸಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಅಡ್ಡಿಯುಂಟು ಮಾಡಲು ಕಾರ್ಯತಂತ್ರ ರೂಪಿಸುತ್ತಿದ್ದ ನಕ್ಸಲೀಯರ ಗುಂಪಿನ ಬಗ್ಗೆ ಮಾಹಿತಿ ಪಡೆದಿದ್ದು, ಈ ಪ್ರದೇಶದಲ್ಲಿ ಡಿಆರ್ ಜಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಎನ್ ಕೌಂಟರ್ ಬಳಿಕ ಮೂವರು ನಕ್ಸಲೀಯರ ಮೃತದೇಹದೊಂದಿಗೆ  ಒಂದು 303 ರೈಪಲ್ ಮತ್ತು ಎರಡು ತುಂಬಿದ ಗನ್ ಗಳು ಸ್ಥಳದಲ್ಲಿ ಕಂಡುಬಂದಿವೆ.  ಇದಲ್ಲದೇ ಸ್ಥಳದಲ್ಲಿದ್ದ ಕೆಲ ಸ್ಪೋಟಕ ಸಲಕರಣೆಗಳು , ನಕ್ಸಲ್ ಸಾಹಿತ್ಯ, ಕಾಗದ ಪತ್ರಗಳನ್ನು  ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆಘಟನೆಯಲ್ಲಿ ಐವರು ನಕ್ಸಲೀಯರು ಗಾಯಗೊಂಡಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಆದರೆ. ಅವರನ್ನು ಅರಣ್ಯ ಪ್ರದೇಶದಿಂದ  ಕರೆದುಕೊಂಡು ಹೋಗುವಲ್ಲಿ ಸಹೋದ್ಯೋಗಿಗಳು ಯಶಸ್ವಿಯಾಗಿದ್ದಾರೆ . ಅವರು ತಂಗಿದ ಸ್ಥಳದಲ್ಲಿ ಗೆಲೆಟಿನ್ ಕಡ್ಡಿಗಳು, ಗನ್ ಪೌಡರ್, 200 ಮೆಟ್ರಿಕ್ ಗೂ ಹೆಚ್ಚು ಬಂಡಲ್ ಗಳ ವಿದ್ಯುತ್ ತಂತಿ , ಶಸಾಸ್ತ್ರ ದುರಸ್ಥಿಗೊಳಿಸುವ ಮೆಷಿನ್ ಕೂಡಾ  ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಬಿಜಾಪುರ ಜಿಲ್ಲೆ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ನವೆಂಬರ್ 12 ರಂದು ನಕ್ಸಲ್ ಪೀಡಿತ ಏಂಟು ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.

About the author

ಕನ್ನಡ ಟುಡೆ

Leave a Comment