ರಾಷ್ಟ್ರ ಸುದ್ದಿ

ರಾಯ್ ಬರೇಲಿ: ಹಮ್ಸಾಫರ್ ಟ್ರೈನ್ ರೇಕ್ , 900ನೇ ಕೋಚ್​ಗೆ ಪ್ರಧಾನಿ ಚಾಲನೆ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ರಾಯ್ ಬರೇಲಿ: ಯುಪಿಎ ಅಧಿನಾಯಕಿ ಸೋನಿಯಾಗಾಂಧಿ ಪ್ರತಿನಿಧಿಸುವ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ   ಇಂದು ಪ್ರಧಾನಿ ನರೇಂದ್ರಮೋದಿ  ಹಮ್ಸಾಫರ್ ರೇಕ್ ಅತ್ಯಾಧುನಿಕ ರೈಲ್ವೆ ಕೋಚ್​ ಕಾರ್ಖಾನೆಯ 900ನೇ ರೈಲ್ವೆ ಕೋಚ್​ಗೆ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು,   ಈ ಕಾರ್ಖಾನೆಯನ್ನು ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದ ಕಾರ್ಖಾನೆ ಮಾಡುವುದು ಸರ್ಕಾರದ ಗುರಿಯಾಗಿದೆ ಎಂದರು.ಹಿಂದಿನ ಕಾಂಗ್ರೆಸ್ ಸರ್ಕಾರ ಕಾರ್ಖಾನೆಯನ್ನು ನಿರ್ಲಕ್ಷಿಸಿದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ ಅದನ್ನು ಬದಲಾಯಿಸುವುದಾಗಿ ಹೇಳಿದರು.

2007ರಲ್ಲಿ ಈ ಕಾರ್ಖಾನೆಯನ್ನು ಮಂಜೂರು ಮಾಡಲಾಗಿದ್ದು, 2010ರಲ್ಲಿ ಪೂರ್ಣಗೊಳಿಸಲಾಗಿದೆ.  ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಹೊಸ ಕೋಚ್ ತಯಾರಿಕೆಗೆ  ಅವಕಾಶ ಕಲ್ಪಿಸಿಲ್ಲ. ಆದರೆ. ಪ್ರತಿವರ್ಷ 500 ಕೋಚ್  ತಯಾರಿಸುವುದು ನಮ್ಮ ಗುರಿಯಾಗಿದೆ ಎಂದರು.

About the author

ಕನ್ನಡ ಟುಡೆ

Leave a Comment