ಅ೦ತರಾಷ್ಟ್ರೀಯ

ಇಸ್ಲಾಮಾಬಾದ್‌: ರಾವಲ್ಪಿಂಡಿ ಆಸ್ಪತ್ರೆಯಲ್ಲಿ ಜೈಶ್‌ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ ಸಾವು

ಇಸ್ಲಾಮಾಬಾದ್‌: ಪಾಕಿಸ್ಥಾನದ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ ಮೃತಪಟ್ಟಿರುವುದಾಗಿ ವರದಿಗಳು ತಿಳಿಸಿವೆ. ಮೂಲಗಳ ಪ್ರಕಾರ ಉಗ್ರ ಅಜರ್‌ ಕಳೆದ ಮಾರ್ಚ್‌ 2ರಂದು ರಾವಲ್ಪಿಂಡಿಯಲ್ಲಿನ ಮಿಲಿಟರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಆದರೆ ಪಾಕ್‌ ಸರಕಾರ ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ಇನ್ನಷ್ಟೇ ಕೊಡಬೇಕಿದೆ. ಪಾಕ್‌ ಗುಪ್ತಚರ ದಳದ ಉನ್ನತ ಮೂಲಗಳ ಪ್ರಕಾರ ಅಜರ್‌ ಲಿವರ್‌ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾನೆ.

ಕೆಲವು ವರದಿಗಳ ಪ್ರಕಾರ ಭಾರತೀಯ ವಾಯು ಪಡೆ ಕಳೆದ ಫೆ.26ರಂದು ಪಾಕಿಸ್ಥಾನದ ಬಾಲಾಕೋಟ್‌ ನಲ್ಲಿನ ಜೈಶ್‌ ಎ ಮೊಹಮ್ಮದ್‌ ಉಗ್ರ ತರಬೇತಿ ಶಿಬಿರಗಳ ಮೇಲೆ ಬಾಂಬ್‌ ದಾಳಿ ನಡೆಸಿದ್ದಾಗ ಮಸೂದ್‌ ಅಜರ್‌, ಶಿಬಿರ ಕಟ್ಟಡದಲ್ಲಿ ಮಲಗಿಕೊಂಡಿದ್ದ. ಐಎಎಫ್ ವಾಯು ದಾಳಿಯಲ್ಲಿ ಕರ್ನಲ್‌ ಸಲೀಮ್‌ ಎಂಬ ಐಎಸ್‌ಐ ಅಧಿಕಾರಿಯೂ ಮೃತಪಟ್ಟಿದ್ದ ಎಂದು ಮೂಲಗಳು ತಿಳಿಸಿದ್ದವು. ಈ ನಡುವೆ ಮಸೂದ್‌ ಅಜರ್‌ ಸತ್ತಿದ್ದಾನೆ ಎಂಬ ವರದಿಗಳನ್ನು ಜೈಶ್‌ ಎ ಮೊಹಮ್ಮದ್‌ ತಿರಸ್ಕರಿಸಿದೆ; ಆತ ಇನ್ನೂ ಜೀವಂತ ಇದ್ದಾನೆ ಎಂದು ಅದು ಹೇಳಿದೆ.

ಕಳೆದ ಶುಕ್ರವಾರ ಪಾಕ್‌ ವಿದೇಶ ಸಚಿವ ಶಾ ಮಹಮೂದ್‌ ಕುರೇಶಿ ಪಾಕಿಸ್ಥಾನದಲ್ಲೇ ಇದ್ದಾನೆ ಎಂದು ಒಪ್ಪಿಕೊಂಡಿದ್ದರು. “ಆತ ಪಾಕಿಸ್ಥಾನದಲ್ಲೇ ಇದ್ದಾನೆ; ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಆತ ತುಂಬಾ ಅಸ್ವಸ್ಥನಿದ್ದಾನೆ ಮತ್ತು ಮನೆಯಿಂದ ಹೊರಹೋಗಲಾಗದಷ್ಟು ಅನಾರೋಗ್ಯ ಪೀಡಿತನಾಗಿದ್ದಾನೆ’ ಎಂದು ಹೇಳಿದ್ದರು.

About the author

ಕನ್ನಡ ಟುಡೆ

Leave a Comment