ರಾಷ್ಟ್ರ

ರಾಷ್ಟ್ರದ್ರೋಹ ಆರೋಪ

ಅಹಮದಾಬಾದ್‌: ರಾಷ್ಟ್ರದ್ರೋಹ ಆರೋಪ ಪ್ರಕರಣ ಸಂಬಂಧ ಗುಜರಾತ್‌ನ ಪಟೇಲ್‌ ಸಮುದಾಯದ ನಾಯಕ ಹಾರ್ದಿಕ್‌ ಪಟೇಲ್‌ ಮತ್ತಿತರ ಆರೋಪಿಗಳ ವಿರುದ್ಧ ಇಲ್ಲಿನ ಸೆಷನ್‌ ಕೋರ್ಟ್‌ ವಾರೆಂಟ್‌ ಜಾರಿ ಮಾಡಿದೆ.2015ರ ಅಗಸ್ಟ್‌ನಲ್ಲಿ ಪಟೇಲ್‌ ಸಮುದಾಯದ ಮೀಸಲಾತಿ ಹೋರಾಟದ ಸಂದರ್ಭ ಹಿಂಚಾಸಾರ ನಡೆದು 13 ಮಂದಿ ಸಾವನ್ನಪ್ಪಿದ್ದರು. ಈ ಸಂಬಂಧ ಹಾರ್ದಿಕ್‌ ಪಟೇಲ್‌ ಮತ್ತಿತರರ ವಿರುದ್ಧ ಅಹಮದಾಬಾದ್‌ ಕ್ರೈಂ ಬ್ಯ್ರಾಂಚ್‌ ಪೊಲೀಸರು ರಾಷ್ಟ್ರದ್ರೋಹ ಆರೋಪದಡಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತಿದೆ. ಆದರೆ, ಹಾರ್ದಿಕ್‌ ಪಟೇಲ್‌ ಕೋರ್ಟ್‌ ವಿಚಾರಣೆಗೆ ಗೈರು ಆಗಿದ್ದು, ಇದರಿಂದ ನ್ಯಾ. ಡಿ.ಪಿ.ಮಹಿದಾ ಅವರು ಬುಧವಾರ ಹಾರ್ದಿಕ್‌ ಪಟೇಲ್‌ ವಿರುದ್ಧ ಜಾಮೀನು ಸಹಿತ ವಾರೆಂಟ್‌ ಹೊಡೆಸಿದ್ದಾರೆ. ಅಲ್ಲದೇ, ಪ್ರಕರಣದ ವಿಚಾರಣೆಯನ್ನು ಏಪ್ರಿಲ್‌ 25ಕ್ಕೆ ಮುಂದೂಡಿದ್ದಾರೆ.

About the author

Pradeep Kumar T R

Leave a Comment