ರಾಷ್ಟ್ರ ಸುದ್ದಿ

ರಾಷ್ಟ್ರಪತಿ, ಪ್ರಧಾನಿ ಪ್ರವಾಸಕ್ಕೆ ಅತ್ಯಾಧುನಿಕ ಸುರಕ್ಷಿತ ದೇಶಿ ಏರ್‌ಫೋರ್ಸ್‌ ಒನ್ ಶೀಘ್ರ ಲಭ್ಯ

ಹೊಸದಿಲ್ಲಿ: ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳ ದೂರದ ಪ್ರಯಾಣಕ್ಕೆ ಭಾರತದ ‘ಏರ್‌ಫೋರ್ಸ್‌ ಒನ್‌’ ಸಿದ್ಧಗೊಳ್ಳುತ್ತಿದೆ. ಎರಡು ನೂತನ ಬೋಯಿಂಗ್‌ 777 ವಿಮಾನಗಳಿಗೆ ವಿಶ್ವದರ್ಜೆಯ ಅತ್ಯಾಧುನಿಕ ಭದ್ರತಾ ಸಲಕರಣೆಗಳ ಜೋಡಣೆ ನಡೆಯುತ್ತಿದೆ. ಕ್ಷಿಪಣಿ ಮುನ್ನೆಚ್ಚರಿಕೆ ಮತ್ತು ಪ್ರತಿಸ್ಪಂದನಾ ವ್ಯವಸ್ಥೆ ಹಾಗೂ ಎನ್‌ಕ್ರಿಪ್ಟ್‌ (ಗೂಢಲಿಪೀಕರಣ) ಮಾಡಲಾದ ಸಂವಹನ ವ್ಯವಸ್ಥೆಗಳನ್ನು ಇದು ಹೊಂದಿರುತ್ತದೆ.

ಈ ವಿಮಾನಗಳಿಗೆ ‘ಏರ್‌ ಇಂಡಿಯಾ ಒನ್’ ಅಥವಾ ಇಂಡಿಯನ್‌ ಏರ್‌ ಫೋರ್ಸ್‌ ಒನ್‌’ ಎಂದು ಹೆಸರಿಡುವ ಸಾಧ್ಯತೆಯಿದೆ. ಅಮೆರಿಕದ ಅಧ್ಯಕ್ಷ ‘ಹಾರಾಡುವ ಕಚೇರಿ’ಯಂತೆಯೇ ಇದೂ ಇರಲಿದೆ. ಭಾರತದ ಕೋರಿಕೆಯಂತೆ ಅಮೆರಿಕದ ವಿದೇಶಾಂಗ ಇಲಾಖೆ 2 ಬಿ777 ಲಾರ್ಜ್‌ ಇನ್‌ಫ್ರಾ ರೆಡ್‌ ಕೌಂಟರ್‌ಮೆಶರ್ಸ್ ಹಾಗೂ ಸೆಲ್ಫ್‌ ಪ್ರೊಟೆಕ್ಷನ್‌ ಸೂಟ್ಸ್ ಗಳನ್ನು ಅಂದಾಜು 19 ಕೋಟಿ ಡಾಲರ್ ಬೆಲೆಗೆ ಮಾರಾಟ ಮಾಡಲು ಒಪ್ಪಿದೆ.

‘ಈ ಪ್ರಸ್ತಾವಿತ ಮಾರಾಟದಿಂದ ಅಮೆರಿಕದ ವಿದೇಶಾಂಗ ನೀತಿ ಮತ್ತು ರಾಷ್ಟ್ರೀಯ ಭದ್ರತೆ ನೀತಿ ಅಮೆರಿಕ-ಭಾರತ ವ್ಯೂಹಾತ್ಮಕ ಬಾಂಧವ್ಯಗಳ ಬಲವರ್ಧನೆಗೆ ನೆರವಾಗುತ್ತದೆ. ಇಂಡೋ-ಪೆಸಿಫಿಕ್ ಮತ್ತು ದಕ್ಷಿಣ ಏಷ್ಯಾ ವಲಯದಲ್ಲಿ ರಾಜಕೀಯ ಸ್ಥಿರತೆ, ಶಾಂತಿ ಮತ್ತು ಆರ್ಥಿಕ ಪ್ರಗತಿಗೆ ಇದರಿಂದ ನೆರವಾಗುತ್ತದೆ’ ಎಂದು ಅಮೆರಿಕದ ಭದ್ರತೆ ರಕ್ಷಣಾ ಸಹಕಾರ ಏಜೆನ್ಸಿ (ಡಿಎಸ್‌ಸಿಎ) ತಿಳಿಸಿದೆ.

About the author

ಕನ್ನಡ ಟುಡೆ

Leave a Comment