ರಾಜಕೀಯ

ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿರ್ಧಾರಕ್ಕೆ ಶ್ರೀರಾಮುಲು ಸಹಮತ.

ಕೊಪ್ಪಳ:  ಬಿ.ಎಸ್​.ಯಡಿಯೂರಪ್ಪ ಹೊರತುಪಡಿಸಿ ಇನ್ಯಾವುದೇ ಸಂಸದರಿಗೆ ಟಿಕೆಟ್​ ಇಲ್ಲ ಎಂದು ಹೇಳಿರುವ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಮಾತಿಗೆ ತಾವೂ ಸೇರಿ ಎಲ್ಲ ಸಂಸದರ ಸಹಮತವಿದೆ ಎಂದು ಹೇಳಿದ್ದಾರೆ.ಟಿಕೆಟ್​ ಹಂಚಿಕೆ ವಿಚಾರದಲ್ಲಿ ರಾಷ್ಟ್ರೀಯ ಅಧ್ಯಕ್ಷರ ನಿರ್ಧಾರಕ್ಕೆ ನಮ್ಮೆಲ್ಲರ ಒಪ್ಪಿಗೆಯಿದೆ ಎಂದಿದ್ದಾರೆ.

ರಾಹುಲ್​ ಗಾಂಧಿ ರಾಜ್ಯ ಪ್ರವಾಸದ ಕುರಿತು ಮಾತನಾಡಿದ ಸಂಸದ ಶ್ರೀರಾಮುಲು ಚುನಾವಣಾ ಪ್ರಚಾರಕ್ಕಾ​ಗಾಗಿ ಈ ಪ್ರವಾಸ ನಡೆಸುತ್ತಿದ್ದಾರೆ. ಭಾಷಾ ಸಮಸ್ಯೆಯಿಂದ ಬಸವಣ್ಣನ ವಚನಗಳನ್ನು ತಪ್ಪಾಗಿ ಹೇಳಿರಬಹುದು. ಚುನಾವಣೆ ಸಂದರ್ಭದಲ್ಲಿ ಅವರಿಗೆ ಬಸವಣ್ಣ ನೆನಪಾಗಿದ್ದಾರೆ ಎಂದು ಟೀಕೆ ಮಾಡಿದ್ದಾರೆ.

ರಾಜ್ಯದಲ್ಲಿ ರಾಹುಲ್ ಗಾಂಧಿ ಹೋದಲ್ಲೆಲ್ಲ ಜನರು ಮೋದಿ ಮೋದಿ ಎಂದು ಕೂಗುತ್ತಿದ್ದಾರೆ. ರಾಜ್ಯದಲ್ಲಿ ನರೇಂದ್ರ ಮೋದಿ ಹವಾ ಇದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment