ರಾಷ್ಟ್ರ

ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನಕ್ಕೆ ಪ್ರಧಾನಮಂತ್ರಿ ನರೇಂದ್ರಮೋದಿ ಚಾಲನೆ

ಮಧ್ಯಪ್ರದೇಶ :  ರಾಷ್ಟ್ರ ಪಂಚಾಯತ್ ರಾಜ್ ಸದೃಢಗೊಳಿಸುವ  ನಿಟ್ಟಿನಲ್ಲಿ ಮತ್ತೊಂದು ಯೋಜನೆಗೆ  ಪ್ರಧಾನಿ ನರೇಂದ್ರಮೋದಿ ಇಂದು  ಚಾಲನೆ ನೀಡಿದರು. ಪಂಚಾಯತ್ ರಾಜ್ ದಿನದ ಅಂಗವಾಗಿ ಬುಡುಕಟ್ಟ ಜನರ ಪ್ರಾಬಲ್ಯ ಹೆಚ್ಚಾಗಿರುವ ರಾಮನಗರದಲ್ಲಿ  ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನಕ್ಕೆ ಚಾಲನೆ  ನೀಡಿದರು. ಗ್ರಾಮೀಣ  ಸ್ಥಳೀಯ ಸಂಸ್ಥೆಯನ್ನು ಸ್ವಸಾಮರ್ಥ್ಯದ ಆಧಾರ ಸುಸ್ಥಿರಗೊಳಿಸುವುದು ಆರ್ಥಿಕ ಭದ್ರತೆ  ಹಾಗೂ ಹೆಚ್ಚಿನ ದಕ್ಷತೆ ಒದಗಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.

ಪಂಚಾಯತ್ ರಾಜ್ ಸಂಸ್ಥೆಗಳ ಸಾಮರ್ಥ್ಯ ಮತ್ತು ದಕ್ಷತೆಯನ್ನು ಹೆಚ್ಚಿಸಿ ಅಧಿಕಾರ ಮತ್ತು ಜವಾಬ್ದಾರಿ ಹಂಚಿಕೆಯನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಮುಂದಿನ ಐದು  ವರ್ಷಗಳಲ್ಲಿ ಮಧ್ಯಪ್ರದೇಶದಲ್ಲಿನ ಬುಡಕುಟ್ಟ ಸಮುದಾಯದ ಪ್ರದೇಶದ ಅಭಿವೃದ್ದಿ ನೀಲಿನಕ್ಷೆಯನ್ನು ಇದೇ ಸಂದರ್ಭದಲ್ಲಿ ಪ್ರಧಾನಿ ಅನಾವರಣಗೊಳಿಸಿದರು.

ಈ  ಯೋಜನೆಯಡಿ ಪಂಚಾಯಿತಿಯ ಬುಡಕಟ್ಟು ಪ್ರದೇಶಗಳ ಅಭಿವೃದ್ದಿಗಾಗಿ 2 ಲಕ್ಷ ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಮಾನೆರಿಯಲ್ಲಿ ಎಲ್ ಪಿಜಿ ಬಾಟ್ಲಿಂಗ್  ಘಟಕ ನಿರ್ಮಾಣಕ್ಕೆ ಪ್ರಧಾನಿ ಶಂಕುಸ್ಥಾಪನೆ  ನೆರವೇರಿಸಿದರು. ಸರ್ಕಾರದ  ಆಡಳಿತ ಪರಿಣಾಮಕಾರಿ ಅನುಷ್ಛಾನದಲ್ಲಿ ನಿಗದಿತ  ಗುರಿ ಸಾಧಿಸಿದ ಬಯಲು ಮುಕ್ತ ಶೌಚಾಲಯ ವ್ಯವಸ್ಥೆ ಹೊಂದಿದ್ದ ಹಾಗೂ ಎಲ್ ಪಿಜಿ ಅನಿಲ ಮೂಲಕ ಹೊಗೆ ರಹಿತ ಪ್ರದೇಶಗಳನ್ನಾಗಿಸಿದ  ಪಂಚಾಯತ್  ಗಳಿಗೆ  ಪುರಸ್ಕಾರ ನೀಡಿ ಗೌರವಿಸಲಾಯಿತು.

 

 

About the author

ಕನ್ನಡ ಟುಡೆ

Leave a Comment