ದೇಶ ವಿದೇಶ

ರಾಷ್ಟ್ರ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಲು ಯುಎನ್ಎಸ್‏ಸಿಗೆ ಸುಷ್ಮಾ ಸ್ವರಾಜ್ ಹೇಳಿಕೆ

ಚೀನಾ: ಉಗ್ರಗಾಮಿಗಳಿಗೆ ಉತ್ತೇಜನ ಮತ್ತು ಆರ್ಥಿಕ ನೆರವು ನೀಡುವ ರಾಷ್ಟ್ರಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಲಬೇಕೆಂದು ಭಾರತ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಒತ್ತಾಯಿಸಿದ್ದಾರೆ. ಬೀಜಿಂಗ್ ನಲ್ಲಿ ನಡೆಯುತ್ತಿರುವ ಶಾಂಘೈ ಕೋ ಆಪರೇಷನ್​ ಆರ್ಗನೈಸೇಷನ್ (ಎಸ್ ಸಿಓ)ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಂಡಿರುವ ಸುಷ್ಮಾ ಸ್ವರಾಜ್  “ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟವು ಕೇವಲ ಭಯೋತ್ಪಾದಕರನ್ನು ಇಲ್ಲವಾಗಿಸುವುದಲ್ಲ, ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ಮತ್ತು ಬೆಂಬಲ ನೀಡುವ ರಾಷ್ಟ್ರಗಳ ವಿರುದ್ಧ ಬಲವಾದ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಸಹ ಒಳಗೊಂಡಿರಬೇಕು.” ಎಂದಿದ್ದಾರೆ. ಭಯೋತ್ಪಾದನೆ ಅಥವಾ ಉಗ್ರವಾದ ಮಾನವನ ಅತಿ ದೊಡ್ಡ ಶತ್ರು ಎಂದ ಸ್ವರಾಜ್ ಇದರ ವಿರುದ್ಧ ಹೋರಾಡಲು ಒಂದು ಸುಭದ್ರ ವ್ಯವಸ್ಥೆಯನ್ನು ರೂಪಿಸಬೆಕಾದ ಅಗತ್ಯವಿದೆ ಎಂದಿದ್ದಾರೆ.

ಅಂತರಾಷ್ಟ್ರಿಯ ಸ್ಥಿರತೆ ಹಾಗು ಶಾಂತಿಯುತ ಜೀವನ ಬಯಸುವ ಸಮಾಜಗಳಲ್ಲಿ ಭಯದ ಗೋಡೆಗಳನ್ನು ನಿರ್ಮಿಸುವುದು ಸಲ್ಲ. ಇಂತಹಾ ಕ್ರಿಮಿನಲ್ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಅನಿವಾರ್ಯ.ಎಂದು ಸುಷ್ಮಾ ಒತ್ತಿ ಹೇಳಿದ್ದಾರೆ.  ಜಾಗತಿಕ ಭಯೋತ್ಪಾದನೆ ಸಂಬಂಧ ಎಸ್ ಸಿಓ ತಾಳಿರುವ ಸ್ಪಷ್ಟ ನಿಲುವಿಗೆ ಸುಷ್ಮಾ ಸ್ವರಾಜ್ ಸಂತಸ ವ್ಯಕ್ತಪಡಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವೆ ಎರಡು ರಾಷ್ಟ್ರದ ಭೇಟಿಯ ಕಾರ್ಯಕ್ರಮದಡಿ ಮಂಗೋಲಿಯಾಗೆ ತೆರಳಲಿದ್ದಾರೆ.

 

 

About the author

ಕನ್ನಡ ಟುಡೆ

Leave a Comment