ರಾಷ್ಟ್ರ ಸುದ್ದಿ

ರಾಹುಲ್‌ ಗಾಂಧಿ ಬಳಿ 4 ಪಾಸ್‌ಪೋರ್ಟ್‌ ಇವೆ: ಸುಬ್ರಮಣಿಯನ್‌ ಸ್ವಾಮಿ

ಹೊಸದಿಲ್ಲಿ: ನಾನು ಚೌಕಿದಾರ ಅಲ್ಲ. ನಾನೊಬ್ಬ ಚಿಂತಕ. ಅಪರಾಧಿಗಳನ್ನು ಕಾನೂನಿನಡಿ ಹೇಗೆ ಶಿಕ್ಷಿಸಬಹುದು ಎಂಬುದನ್ನಷ್ಟೇ ಆಲೋಚಿಸುತ್ತೇನೆ ಎಂದಿರುವ ಬಿಜೆಪಿ ರಾಜ್ಯಸಭೆ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಅವರು ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾರ‍್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ”ರಾಹುಲ್‌ ಬಳಿ ನಾಲ್ಕು ಪಾಸ್‌ಪೋರ್ಟ್‌ಗಳಿವೆ. ಒಂದರಲ್ಲಿ ಅವರ ಹೆಸರು ರಾಹುಲ್‌ ವಿನ್ಸಿ ಎಂದಿದೆ. ಅಲ್ಲದೇ ತಾವು ಎಂಫಿಲ್‌ ಮಾಡಿದ್ದೇನೆ ಎಂದು ರಾಹುಲ್‌ ಹೇಳುತ್ತಿರುವುದೆಲ್ಲವೂ ಬೊಗಳೆ,” ಎಂದು ಕಿಡಿಕಾರಿದ್ದಾರೆ. ಚುನಾವಣೆ ಸಮಯದಲ್ಲಿ ಮಾತ್ರ ರಾಹುಲ್‌ ಪವಿತ್ರ ಧಾರ ಧರಿಸಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಅವರದ್ದು ಮತಬ್ಯಾಂಕ್‌ ರಾಜಕಾರಣ ಎಂದು ಜರಿದಿದ್ದಾರೆ. ಭೂ ಅವ್ಯವಹಾರದಲ್ಲಿ ರಾಬರ್ಟ್‌ ವಾದ್ರಾ ಶೀಘ್ರವೇ ಬಂಧನಕ್ಕೆ ಗುರಿಯಾಗಲಿದ್ದಾರೆ ಎಂದಿದ್ದಾರೆ.

About the author

ಕನ್ನಡ ಟುಡೆ

Leave a Comment