ರಾಷ್ಟ್ರ ಸುದ್ದಿ

ರಾಹುಲ್‌ ಗಾಂಧಿ ಬ್ರಾಹ್ಮಣನಾಗುವುದು ಹೇಗೆ: ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ

ಶಿರಸಿ: ಅಪ್ಪ ಮುಸ್ಲಿಮ್‌, ಅಮ್ಮ ಕ್ರಿಶ್ಚಿಯನ್‌ ಆಗಿರುವಾಗ ಮಗ ಮಾತ್ರ ಹೇಗೆ ಬ್ರಾಹ್ಮಣನಾಗುತ್ತಾನೆ? ತಾನೊಬ್ಬ ಬ್ರಾಹ್ಮಣನೆಂದು ರಾಹುಲ್‌ ಗಾಂಧಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಪಕ್ಷದ ಕಾರ್ಯಕ್ರಮವೊಂದರಲ್ಲಿ ಗೇಲಿ ಮಾಡಿದ್ದಾರೆ.

‘ಜಗತ್ತಿನ ಯಾವುದೇ ಪ್ರಯೋಗಾಲಯದಲ್ಲೂ ಹೀಗೆ ಆಗುವುದಕ್ಕೆ ಸಾಧ್ಯವಿಲ್ಲ. ಕಾಂಗ್ರೆಸ್‌ನ ಲೆಬೊರೇಟರಿಯಲ್ಲಿ ಮಾತ್ರ ಇಂಥ ಹೈಬ್ರಿಡ್‌ ತಳಿಗಳು ತಯಾರಾಗಲು ಸಾಧ್ಯ. ಆದರೆ ದೇಶದ ಜನತೆ ಈಗ ಕಾಂಗ್ರೆಸ್‌ ನಾಯಕರ ಇಂಥ ಸುಳ್ಳುಗಳನ್ನು ನಂಬಲು ಸಿದ್ಧರಿಲ್ಲ’ ಎಂದು ಅನಂತಕುಮಾರ್‌ ಹೆಗಡೆ ತಿಳಿಸಿದ್ದಾರೆ.

‘ಮಹಾಘಟಬಂಧನ್‌ ಎನ್ನುವುದು ರಾಜಕೀಯ ಆತ್ಮಹತ್ಯಾ ದಳವಾಗಲಿದೆ. ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೊಲಂಬಿಯಾಕ್ಕೆ ಹೋಗಲಿದ್ದಾರೆ’ ಎಂದು ಹೆಗಡೆ ವ್ಯಂಗ್ಯವಾಡಿದ್ದಾರೆ. ಇತ್ತೀಚೆಗೆ ಅನಂತಕುಮಾರ ಹೆಗಡೆ, ಹಿಂದೂ ಹುಡುಗಿಯ ಮೈಮುಟ್ಟಿದವರ ಕೈ ಇರಬಾರದು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.

About the author

ಕನ್ನಡ ಟುಡೆ

Leave a Comment