ರಾಷ್ಟ್ರ ಸುದ್ದಿ

ರಾಹುಲ್ ಗಾಂಧಿ ತಂದೆ ಎಲ್ಲರಿಗೂ ಗೊತ್ತು ಆದರೆ ಮೋದಿ ತಂದೆಯ ಬಗ್ಗೆ ಯಾರಿಗೂ ಗೊತ್ತಿಲ್ಲ: ಕಾಂಗ್ರೆಸ್ ನ ಮಾಜಿ ಸಚಿವ

ಜೈಪುರ: ರಾಜ್ ಬಬ್ಬರ್ ಹಾಗೂ ಸಿ.ಪಿ ಜೋಷಿ ನಂತರ ಕಾಂಗ್ರೆಸ್ ನ ಮತ್ತೋರ್ವ ಸಚಿವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.
ಕಾಂಗ್ರೆಸ್ ನ ಮಾಜಿ ಕೇಂದ್ರ ಸಚಿವ ವಿಲಾಸ್ ಮುತ್ತೇಮ್ವಾರ್ ರಾಜಸ್ಥಾನದಲ್ಲಿ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಪರಂಪರೆಯ ಬಗ್ಗೆ ಮಾತನಾಡಿದ್ದು, ಮಾಜಿ ಕೇಂದ್ರ ಸಚಿವರ ಹೇಳಿಕೆ ವೈರಲ್ ಆಗಿದೆ. ಪ್ರಧಾನಿಯಾಗುವುದಕ್ಕೂ ಮುನ್ನ ನೀವು ಯಾರಿಗೆ ಗೊತ್ತಿದ್ದಿರಿ? ಈಗಲೂ ಅಷ್ಟೇ ನಿಮ್ಮ ತಂದೆಯ ಹೆಸರನ್ನು ಬಲ್ಲವರು ಯಾರು? ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ತಂದೆ ಯಾರೆಂಬುದು ಎಲ್ಲರಿಗೂ ಗೊತ್ತಿದೆ ಎಂದು ವಿಲಾಸ್ ಮುತ್ತೇಮ್ವಾರ್ ಹೇಳಿದ್ದಾರೆ. ಕಾಂಗ್ರೆಸ್ ಸಚಿವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.

About the author

ಕನ್ನಡ ಟುಡೆ

Leave a Comment