ರಾಷ್ಟ್ರ

ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ ಬಿಜೆಪಿ ಮುಖಂಡ ಶಲಾಬ್ ಮಾನಿ ತ್ರಿಪಾಠಿ 

ಉತ್ತರ ಪ್ರದೇಶ : ನವದೆಹಲಿಯಲ್ಲಿ ಇತ್ತೀಚಿಗೆ ನಡೆದ ಎಐಸಿಸಿ ಮಹಾಧಿವೇಶನದಲ್ಲಿ ಪ್ರಧಾನಿ ನರೇಂದ್ರಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ  ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಶಲಾಬ್ ಮಾನಿ ತ್ರಿಪಾಠಿ ಮಾನಹಾನಿ ಪ್ರಕರಣ ದಾಖಲಿಸಿದ್ದಾರೆ.

ಡಿಯೊರಿಯಾ ಜಿಲ್ಲೆಯ ತ್ವರಿತ ನ್ಯಾಯಾಲಯದಲ್ಲಿ ಐಪಿಸಿ ಸೆಕ್ಷನ್ 499 ಹಾಗೂ 500ರ ಅನ್ವಯ ಬಿಜೆಪಿ ವಕ್ತಾರ ಶಲಾಬ್ ಮಾನಿ ತ್ರಿಪಾಠಿ  ಪ್ರಕರಣ ದಾಖಲಿಸಿದ್ದಾರೆ. ಏಪ್ರಿಲ್ 5 ರಂದು ವಿಚಾರಣೆಗೆ ದಿನಾಂಕ ನಿಗದಿಯಾಗಿದೆ ಎಂದು ತ್ರಿಪಾಠಿ ಪರ ವಕೀಲರು ತಿಳಿಸಿದ್ದಾರೆ. ನೀರವ್ ಮೋದಿ,  ಲಲಿತ್ ಮೋದಿ ಅವರೊಂದಿಗೆ ಪ್ರಧಾನಿ ನರೇಂದ್ರಮೋದಿ ಅವರನ್ನು ಹೋಲಿಕೆ ಮಾಡುವ ಮೂಲಕ ಅವಹೇಳನಕಾರಿಯಾಗಿ ರಾಹುಲ್ ಗಾಂಧಿ ಮಾತನಾಡಿದ್ದಾರೆ.

ಅಲ್ಲದೇ ಮೋದಿ ಭ್ರಷ್ಟಾಚಾರಿ ಎಂಬಂತೆ ಕರೆದಿದ್ದು ಬಿಜೆಪಿ ಕಾರ್ಯಕರ್ತರಿಗೆ ನೋವುಂಟು ಮಾಡಿದೆ .ಈ ಕಾರಣದಿಂದಾಗಿ ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿರುವುದಾಗಿ ಶಲಾಬ್ ಮಾನಿ ತ್ರಿಪಾಠಿ ಹೇಳಿದ್ದಾರೆ.

 

About the author

ಕನ್ನಡ ಟುಡೆ

Leave a Comment