ರಾಷ್ಟ್ರ ಸುದ್ದಿ

ರಾಹುಲ್ ಗಾಂಧಿ ಸಾಕಷ್ಟು ಶ್ರಮ ವಹಿಸಿ ಪಕ್ಷ ಮುನ್ನಡೆಸಿದ್ದಾರೆ: ಸೋನಿಯಾಗಾಂಧಿ

ನವದೆಹಲಿ: ಪಕ್ಷಕ್ಕಾಗಿ ರಾಹುಲ್ ಗಾಂಧಿ ಸಾಕಷ್ಟು ಶ್ರಮಿಸಿದ್ದು, ಪಕ್ಷವನ್ನು ಸೂಕ್ತ ರೀತಿಯಲ್ಲಿ ಮುನ್ನಡೆಸಿದ್ದಾರೆ ಎಂದು ಯುಪಿಎ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.
ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಐದು ರಾಜ್ಯಗಳ ಪೈಕಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ. ಆದರೆ ಮಧ್ಯ ಪ್ರದೇಶದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಆಡಳಿತಾ ರೂಢ ಬಿಜೆಪಿ ತೀವ್ರ ಪೈಪೋಟಿ ನೀಡುತ್ತಿದೆ. ಉಳಿದಂತೆ ಛತ್ತೀಸ್ ಘಡ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಅಗ್ರ ಸ್ಥಾನದಲ್ಲಿದ್ದು, ಬಿಜೆಪಿ 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಇನ್ನು ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಅತ್ತ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮತ್ತು ಯುಪಿಎ ಮೈತ್ರಿ ಕೂಟದ ಅಧಿನಾಯಕ ಸೋನಿಯಾ ಗಾಂಧಿ ಅವರು, ರಾಹುಲ್ ಗಾಂಧಿ ಸಾಕಷ್ಟು ಶ್ರಮಿಸಿದ್ದಾರೆ. ಅವರ ಮುಂದಾಳತ್ವದಲ್ಲಿ ಕಾಂಗ್ರೆಸ್ ಪಕ್ಷ ಉತ್ತಮ ಸಾಧನೆ ಮಾಡಲಿದೆ ಎಂದು ಚುಟುಕಾಗಿ ಪ್ರತಿಕ್ರಿಯಿಸಿದ್ದಾರೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಸಚಿನ್​ ಪೈಲಟ್​ ಪ್ರತಿಕ್ರಿಯಿಸಿದ್ದು, ‘ಟ್ರೆಂಡ್​ ನಮ್ಮ ಪರವಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್​ ಸರ್ಕಾರ ರಚಿಸುವುದು ಸ್ಪಷ್ಟವಾಗಿದೆ. ಆದರೂ ನಾವು ಅಂತಿಮ ಸಂಖ್ಯೆಗಾಗಿ ಕಾಯುತ್ತೇವೆ. ಯಾರು ಮುಖ್ಯಮಂತ್ರಿ ಆಗಬೇಕು ಎಂಬುದನ್ನು ಕಾಂಗ್ರೆಸ್ ನ ನಾಯಕತ್ವ ಮತ್ತು ಶಾಸಕರು ನಿರ್ಧರಿಸಲಿದ್ದಾರೆ. ಒಂದು ವರ್ಷದ ಹಿಂದೆ ಇದೇ ದಿನದಂದು ರಾಹುಲ್​ ಗಾಂಧಿ ಅವರು ಕಾಂಗ್ರೆಸ್​ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ಜಯವನ್ನು ಅವರಿಗೆ ನಾವು ಉಡುಗೊರೆಯಾಗಿ ನೀಡುತ್ತೇವೆ ಎಂದು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment