ರಾಷ್ಟ್ರ ಸುದ್ದಿ

ರಾಹುಲ್ ತುರ್ತು ಪರಿಸ್ಥಿತಿ ಸರ್ವಾಧಿಕಾರಿಯ ಮೊಮ್ಮಗ: ಕೇಂದ್ರ ಸಚಿವ ಅರುಣ್ ಜೇಟ್ಲಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಹೆ ಎ ಎನ್ ಐ ಸುದ್ದಿಸಂಸ್ಥೆ ಸಂಪಾದಕಿ ಸ್ಮಿತಾ ಪಟೇಲ್ ಅವರಿಗೆ ನೀಡಿದ್ದ ವಿಶೇಷ ಸಂದರ್ಶನ ಒಂದು ಪೂರ್ವನಿಯೋಜಿತ ಸಂದರ್ಶನ ಎನ್ನುವ ಮೂಲಕ ರಾಹುಲ್ ಪ್ರಧಾನಿಯನ್ನು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಟ್ವೀಟ್ ಮಾಡಿದ್ದು ‘ತುರ್ತುಸ್ಥಿತಿ ಸರ್ವಾಧಿಕಾರಿಯಾಗಿದ್ದವರ ಮೊಮ್ಮಗ  ತನ್ನ ನಿಜವಾದ ಡಿಎನ್ಎ ಯನ್ನು ಪ್ರದರ್ಶಿಸಿದ್ದಾರೆ. ಈ ಮೂಲಕ ಓರ್ವ ಸ್ವತಂತ್ರ ಸಂಪಾದಕನನ್ನು ಬೆದರಿಸುತ್ತಾರೆ’ ಎಂದಿದ್ದಾರೆ. ಇತ್ತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಟೀಕೆಗಳಿಗೆ  ನ್ಯಾಶನಲ್ ಯೂನಿಯನ್ ಆಫ್ ಜರ್ನಲಿಸ್ಟ್ಸ್ (ಇಂಡಿಯಾ) ಸಹ ತೀಕ್ಷ್ಣವಾಗಿ ಪ್ರತಿಕ್ರಯಿಸಿದೆ. ಸ್ವತಃ ಸ್ಮಿತಾ ಪಟೇಲ್ ಈ ಕುರಿತು ಟ್ವೀಟ್ ಮಾಡಿದ್ದು ‘ನೀವು ಪತ್ರಿಕಾಗೋಷ್ಠಿಯಲ್ಲಿ ನನ್ನ ಬಗ್ಗೆ ಅಗ್ಗವಾಗಿ ಮಾತನಾಡಿದ್ದೀರಿ,  ನೀವು ಮೋದಿಯ ಬಗ್ಗೆ ಟೀಕಿಸುವುದಾದರೆ ಅವರ ವಿರುದ್ಧ ಮಾತನಾಡಿರಿ.ಆದರೆ ನನ್ನ ಬಗ್ಗೆ ಅಸಂಬದ್ದವಾಗಿ ಮಾತನಾಡಬೇಡಿ, ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷದ ಅಧ್ಯಕ್ಷರಿಂದ ಇಂತಹಾ ಮಾತುಗಳನ್ನು ನಾನು ನಿರೀಕ್ಷಿಸಿಲ್ಲ’ ಎಂದಿದ್ದಾರೆ.
ಹಿರಿಯ ಪತ್ರಕರ್ತೆ ಸುಹಾಸಿನಿ ಹೈದರ್ “ರಾಹುಲ್ ಓರ್ವ ಗೌರವಾನ್ವಿತ ಸಂಪಾದಕರ ವಿರುದ್ಧ ಇಂತಹಾ ಅಪಹಾಸ್ಯಕರ ಶಬ್ದ ಪ್ರಯೋಗಿಸುವ ಮೂಲಕ ನಮ್ಮ ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕೋದ್ಯಮವನ್ನೇ ಅವಮಾನಿಸಿದ್ದಾರೆ.ಕಾಂಗ್ರೆಸ್ ಅಧ್ಯಕ್ಷರಿಂದ ಬಂದ ನಾಚಿಕೆಗೇಡಿನ ಹೇಳಿಕೆ ಇದು” ಎಂದಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಮಾಧ್ಯಮ ಮುಖ್ಯಸ್ಥ ಮತ್ತು ರಾಜ್ಯಸಭಾ ಸದಸ್ಯ ಅನಿಲ್ ಬಲೂನಿ ಇದು ಸ್ವತಂತ್ರ ಪತ್ರಿಕೋದ್ಯಮದ ಮೇಲಿನ ಕಾಂಗ್ರೆಸ್ ಮನಸ್ಥಿತಿಯನ್ನು ತೋರಿಸುತ್ತದೆ.ಈ ಕುರಿತು ರಾಹುಲ್ ಕ್ಷಮೆ ಕೇಳಬೇಕು” ಎಂದು ಆಗ್ರಹಿಸಿದ್ದಾರೆ. ಬುಧವಾರ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ರಾಹುಲ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಪ್ರಧಿನಿ ಮೋದಿಗೆ ನಿಮ್ಮ ಮುಂದೆ ಬರುವ ಧೈರ್ಯವಿಲ್ಲ, ನಾನು ನಿಮ್ಮ ಮುಂದಿದ್ದೇನೆ, ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ದನಿದ್ದೇನೆ. ಅಲ್ಲದೆ ನಾನು ಎಂಟರಿಂದ ಹತ್ತು ದಿನಗಳಿಗೊಮ್ಮೆ ನಿಮ್ಮ ಮುಂದೆ ಬರುತ್ತೇನೆ. ಆದರೆ ಮೋದಿ ನಿನ್ನೆ ನೀಡಿದ್ದ ಸಂದರ್ಶನ ನೀವು ಕೇಳಿದ್ದಿರಿ, ಅಲ್ಲಿ ಸಂಪಾದಕಿ ತಾವೇ ಪ್ರಶ್ನೆ ಕೇಳಿ ತಾವೇ ಉತ್ತರಿಸುತ್ತಿದ್ದರು. ಅದೊಂದು ಪೂರ್ವನಿಯೋಜಿತ ಸಂದರ್ಶನವಾಗಿತ್ತು” ಎಂದಿದ್ದರು.

About the author

ಕನ್ನಡ ಟುಡೆ

Leave a Comment