ಸಿನಿ ಸಮಾಚಾರ

ರಿಯಲ್ ಸ್ಟಾರ್ ಉಪೇಂದ್ರ ಪುತ್ರಿ ಚಿತ್ರರಂಗಕ್ಕೆ ಪಾದಾರ್ಪಣೆ, ದೇವಕಿ ಚಿತ್ರ ಟೀಸರ್ ಬಿಡುಗಡೆ

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರರ ಪುತ್ರಿ ಐಶ್ವರ್ಯ ಉಪೇಂದ್ರ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದು ದೇವಕಿ ಚಿತ್ರದಲ್ಲಿ ತಾಯಿ ಪ್ರಿಯಾಂಕಾ ಜೊತೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇನ್ನು ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಚಿತ್ರರಂಗದಲ್ಲಿ ಹೊಸ ಕಲರವ ಮೂಡಿಸಿದೆ. ಉಪೇಂದ್ರ ಪುತ್ರಿಯ ಮೊದಲ ಸಿನಿಮಾ ಇದಾಗಿದ್ದು ಇದರ ಫಸ್ಟ್ ಲುಕ್ ಅನ್ನು ನಟಿ ಪಾರೂಲ್ ಯಾದವ್ ಬಿಡುಗಡೆ ಮಾಡಿದ್ದಾರೆ. ಚೈಲ್ಡ್ ಟ್ರಾಪಿಂಗ್ ಮಾಫಿಯಾ ಕುರಿತಾಗಿ ಮಾಡಿರುವ ದೇವಕಿ ಸಿನಿಮಾ ಟೀಸರ್ ನಲ್ಲಿ ನೈಜ ದೃಶ್ಯದ ರೀತಿಯಲ್ಲೇ ತೋರಿಸಿದ್ದಾರೆ. ಚಿತ್ರವನ್ನು ಮಮ್ಮಿ ಚಿತ್ರ ಖ್ಯಾತಿಯ ಲೋಹಿತ್ ನಿರ್ದೇಶಿಸಿದ್ದಾರೆ.

About the author

ಕನ್ನಡ ಟುಡೆ

Leave a Comment