ಸಿನಿ ಸಮಾಚಾರ

ರಿಯಾಲಿಟಿ ಶೋನಿಂದ ಹೊರಬಂದ ಕೆಲ ದಿನಗಳಲ್ಲೇ ಅಪಘಾತದಲ್ಲಿ ಡನೀಶ್ ಜೆಹೇನ್ ಸಾವು

ನವದೆಹಲಿ: ರಿಯಾಲಿಟಿ ಶೋನಲ್ಲಿ ಎಲ್ಲರ ಮನಗೆದ್ದಿದ್ದ ಸ್ಪರ್ಧಿಯೊಬ್ಬ ಶೋನಿಂದ ಹೊರಬಂದ ಬೆನ್ನಲ್ಲೇ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಎಂಟಿವಿಯ ಪ್ರಖ್ಯಾತ ರಿಯಾಲಿಟಿ ಶೋ ಏಸ್ ಆಫ್ ಸ್ಪೇಸ್ ನಲ್ಲಿ ಭಾಗವಹಿಸಿದ್ದ ಡನೀಶ್ ಜೆಹೇನ್ ಕೆಲವೇ ದಿನಗಳ ಹಿಂದೆ ಶೋನಿಂದ ಹೊರಬಿದ್ದಿದ್ದರು. ಆದರೆ ದುರಾದೃಷ್ಟವಶಾತ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮದುವೆಯೊಂದಕ್ಕೆ ತೆರಳಿದ್ದ ಡನೀಶ್ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಪಘಾತಕ್ಕೆ ತುತ್ತಾಗಿದ್ದಾರೆ. ರಿಯಾಲಿಟಿ ಶೋ ನಡೆಸಿಕೊಡುತ್ತಿರುವ ವಿಕಾಸ್ ಗುಪ್ತ ಡನೀಶ್ ನಿಧನದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿ ತಿಳಿಸಿದ್ದಾರೆ. ಏಸ್ ಆಫ್ ಸ್ಪೇಸ್ ರಿಯಾಲಿಟಿ ಶೋ ಸಹ ಬಿಗ್ ಬಾಗ್ ನಂತೆಯೇ ಇರುತ್ತದೆ. ಎಂಟಿವಿಯಲ್ಲಿ ಮೊಟ್ಟ ಮೊದಲ ಆವೃತ್ತಿ ಪ್ರಸಾರವಾಗುತ್ತಿದೆ.
 

About the author

ಕನ್ನಡ ಟುಡೆ

Leave a Comment