ಕ್ರೀಡೆ

ರಿಷಬ್ ಮುಂದೆ ನಡೆಯಲ್ಲ ಆಸೀಸ್ ಸ್ಲೆಡ್ಜಿಂಗ್: ಪಂತ್ ಕೊಟ್ಟ ಪ್ರತ್ಯುತ್ತರ, ಜಾಲತಾಣದಲ್ಲಿ ವೈರಲ್

ಅಡಿಲೇಡ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಸ್ಲೆಡ್ಜಿಂಗ್ ಮಾಡಿ ಚಚ್ಚಿಸಿಕೊಳ್ಳುವುದಕ್ಕೆ ಹೋಗದ ಆಸ್ಟ್ರೇಲಿಯಾ ಬೌಲರ್ ಗಳು ಇದೀಗ ಯುವ ಆಟಗಾರ ರಿಷಬ್ ಪಂತ್ ಗೆ ಸ್ಲೆಡ್ಜಿಂಗ್ ಮಾಡಿದ್ದು ಇದಕ್ಕೆ ಪಂತ್ ತಕ್ಕ ತಿರುಗೇಟು ನೀಡಿದ್ದಾರೆ.
ಅಡಿಲೇಡ್ ಓವಲ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟದಂದು ಪ್ಯಾಟ್ ಕಮಿನ್ಸ್ ಬೌಲಿಂಗ್ ನಲ್ಲಿ ರಿಷಬ್ ಬ್ಯಾಟಿಂಗ್ ನಡೆಸುತ್ದಿದ್ದರು. ಆದರೆ ಈ ವೇಳೆ ಪಂತ್ ಬಳಿ ಬಂದ ಪ್ಯಾಟ್ ಮಾತನಾಡಲು ಯತ್ನಿಸಿ ಸ್ಲೆಡ್ಜಿಂಗ್ ಮಾಡಿದ್ದಾರೆ. ಆದರೆ ಪ್ಯಾಟ್ ಮಾತಿಗೆ ತಲೆ ಕೆಡಿಸಿಕೊಳ್ಳದ ಪಂತ್ ಬೌಲರ್ ಮಾತುಗಳನ್ನು ನಿರ್ಲಕ್ಷ್ಯ ಮಾಡಿ ಮುಂದೆ ಸಾಗಿದ್ದಾರೆ. ಇನ್ನು ಪಂತ್ ರನ್ನು ಸ್ಲೆಡ್ಜಿಂಗ್ ಮಾಡಿದ ಆಸೀಸ್ ಬೌಲರ್ ಕೃತ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವ ಆಟಗಾರರನ್ನು ಕೆಣಕ್ಕಿ ಅವರ ಗಮನವನ್ನು ಬೇರೆಡೆ ಸೆಳೆದು ಅವರನ್ನು ಬಹುಬೇಗ ಔಟ್ ಮಾಡುವುದಕ್ಕೆ ಆಸ್ಟ್ರೇಲಿಯಾ ಬೌಲರ್ ಗಳು ಸ್ಲೆಡ್ಜಿಂಗ್ ಗೆ ಮುಂದಾಗುತ್ತಾರೆ. 25 ರನ್ ಗಳಿಸಿದ್ದ ಪಂತ್ ನ್ಯಾಥನ್ ಲಯನ್ ಎಸೆತದಲ್ಲಿ ಔಟಾಗಿ ಪೆಲಿವಿಯನ್ ಸೇರಿದರು.

About the author

ಕನ್ನಡ ಟುಡೆ

Leave a Comment