ರಾಜಕೀಯ

ರೆಬಲ್ ಸ್ಟಾರ್ ಅಂಬರೀಷ್​ ವಿರುದ್ಧ ಅಮರಾವತಿ ಸಹೋದರ ಆಕ್ರೋಶ  

ಮಂಡ್ಯ: ರಾಜಕಾರಣಿಗಳು ಸ್ವಾರ್ಥಕ್ಕಾಗಿ ಕೆಲಸ ಮಾಡುತ್ತಾರೆ. ಯಾವ ರಾಜಕಾರಣಿಗಳನ್ನು ನಂಬಬಾರದು ಎಂದು ನಾಗರಾಜ್ ಕಣ್ಣೀರು ಹಾಕಿದರು. ಇಷ್ಟು ವರ್ಷ ನಾವು ಅಂಬರೀಷ್​ ಅವರನ್ನು ಅಣ್ಣ ಎಂದೇ ತಿಳಿದಿದ್ದೆವು. ಆದರೆ ಟಿಕೆಟ್​ ವಿಚಾರವಾಗಿ ಅವರ ನಡೆ ನಮಗೆ ಬೇಸರ ತಂದಿದೆ ಎಂದು ಅಮರಾವತಿ ಚಂದ್ರಶೇಖರ್​ ಅವರ ತಮ್ಮ ನಾಗರಾಜ್​ ರೆಬಲ್​ ಸ್ಟಾರ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯ ವಿಧಾನಸಭೆ ಕ್ಷೇತ್ರದ ಟಿಕೆಟ್​ ಸಂಬಂಧ ಅಂಬರೀಷ್​ ಅವರು ಯಾವುದೇ ಪ್ರತಿಕ್ರಿಯೆ ನೀಡದಿರುವ ಕುರಿತು ನಾಗರಾಜ್​ ಅವರು ಮಂಡ್ಯದಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಅಂಬರೀಷ್​ ಅವರಿಗೆ ಸ್ಪರ್ಧಿಸುವಂತೆ ಸಾಕಷ್ಟು ಒತ್ತಾಯ ಮಾಡಿದ್ದೆವು. ಆದರೆ ಅವರು ನಾನು ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಅಂಬರೀಷ್​ ಅವರು ನಮ್ಮ ಅಣ್ಣ ಚಂದ್ರಶೇಖರ್​ಗೆ ಟಿಕೆಟ್​ ಕೊಡಿಸಬಹುದಿತ್ತು. ಆದರೆ ಅವರು ಯಾರ ಪರವಾಗಿಯೂ ಮಾತನಾಡುವುದಿಲ್ಲ ಎಂದು ಅಂಬರೀಷ್​ ಹಠ ಹಿಡಿದಿದ್ದಾರೆ ಎಂದು ನಾಗರಾಜ್​ ಅವರು ಅಂಬರೀಷ್​ ವಿರುದ್ಧ ಕಿಡಿ ಕಾರಿದ್ದಾರೆ.

 

About the author

ಕನ್ನಡ ಟುಡೆ

Leave a Comment