ರಾಜ್ಯ ಸುದ್ದಿ

ರೇವಂತ್ ರೆಡ್ಡಿ ಬಂಧನ ಪ್ರಜಾಪ್ರಭುತ್ವದ ಕಗ್ಗೊಲೆ: ಡಿ.ಕೆ ಶಿವಕುಮಾರ್

ಬೆಂಗಳೂರು: ತೆಲಂಗಾಣದ ಕಾಂಗ್ರೆಸ್ ಕಾರ್ಯಾಧ್ಯಕ್ಷ ರೇವಂತ್ ರೆಡ್ಡಿ ಅವರ ಬಂಧನವನ್ನು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ಬೆಳಗಿನ ಜಾವ 3 ಗಂಟೆಗೆ ತೆಲಂಗಾಣದಲ್ಲಿ  ನಮ್ಮ ಪಕ್ಷದ ರೇವಂತ್ ರೆಡ್ಡಿಯವರನ್ನ ಅರೆಸ್ಟ್ ಮಾಡಲಾಗಿದೆ.  ರೇವಂತ್ ಬಂಧನದ ಬಗ್ಗೆ ಅವರ ಪತ್ನಿ ಗೀತಾರಿಂದ ತಿಳಿಯಿತು.  500ಕ್ಕೂ ಅಧಿಕ ಸಂಖ್ಯೆಯಲ್ಲಿ ಪೊಲೀಸರು ಮನೆಗೆ ನುಗ್ಗಿ ಬಂಧಿಸಿದ್ದು, ಈ ಕ್ರಮವನ್ನು ತಾವು ಖಂಡಿಸುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿ ಕೆಸಿಆರ್ ಅವರ ಪ್ರಚಾರ ಸಭೆ ಇದೆ ಎಂಬ ಕಾರಣಕ್ಕೆ ರೇವಂತ್ ರೆಡ್ಡಿ ಅವರನ್ನು ಬೆಳಗ್ಗಿನ ಜಾವ 3 ಗಂಟೆಯ ಹೊತ್ತಿಗೆ ಬಂಧಿಸಿದ್ದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದ ಅವರು ಈ ಕುರಿತು ನಾವು ಚುನಾವಣಾ ಆಯೋಗದ ಮೊರೆಹೋಗುತ್ತೇವೆ  ಎಂದು ಹೇಳಿದ್ದಾರೆ.
ಮನೆಯ ಗೇಟ್ ಮುರಿದು ಏಕಾಏಕಿ ನುಗ್ಗಿ ಬಂಧಿಸಿ, ಪೊಲೀಸರು ಅಮಾನುಷವಾಗಿ ವರ್ತಿಸಿದ್ದಾರೆ.  ಈ ರೀತಿ ನಡೆದುಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ. ಈ ಕೃತ್ಯದ ಹಿಂದೆ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಕೈವಾಡ ಇದೆ. ಈ ರೀತಿ ನಡೆದುಕೊಂಡು ಅವರೇ ಸೋಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ತೆಲಗಾಣದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಡಿ.11 ರಂದು ಫಲಿತಾಂಶ ಹೊರಬೀಳಲಿದೆ.

About the author

ಕನ್ನಡ ಟುಡೆ

Leave a Comment