ಸಿನಿ ಸಮಾಚಾರ

ರೈತರಿಗೆ ಡಿ ಬಾಸ್ ಆಗೋಕೆ ಆಗಲ್ಲ ಎಂದ ಸಿಎಂ ಎಚ್‌ಡಿ.ಕುಮಾರಸ್ವಾಮಿ

ನಟಿ ಹಾಗೂ ರೆಬಲ್ ಸ್ಟಾರ್ ಅಂಬರೀಷ್ ಪತ್ನಿ ಸುಮಲತಾ ಅವರು ಮಂಡ್ಯ ಪಕ್ಷೇತರ ಅಭ್ಯರ್ಥಿಯಾಗಿ ಈ ಬಾರಿಯ ಲೋಕಸಭಾ ಚುನಾವಣೆಗೆ ನಿಂತಿರುವುದು ಗೊತ್ತೇ ಇದೆ. ಸುಮಲತಾ ಪರ ಪ್ರಚಾರಕ್ಕೆ ಮನೆ ಮಕ್ಕಳಂತೆ ದರ್ಶನ್ ಮತ್ತು ಯಶ್ ಬೆಂಲವಾಗಿ ನಿಂತಿರುವುದು ಗೊತ್ತೇ ಇದೆ. ಜೋಡೆತ್ತು ದರ್ಶನ್-ಯಶ್ ಅಷ್ಟೇ ಅಲ್ಲದೇ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್ ಕೂಡ ಸುಮಲತಾ ಅವರಿಗೆ ಬಹಿರಂಗವಾಗಿ ಬೆಂಬಲ ಘೋಷಿಸಿದ್ದಾರೆ.

ಇದೀಗ ಮಂಡ್ಯ ಚುನಾವಣಾ ಕಣವು ವೈಯಕ್ತಿಕ ಟೀಕೆಗಳಿಂದ ತುಂಬಿ ತುಳುಕುವಂತಾಗಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ನಿಂತಿರುವ ನಟ ದರ್ಶನ್ ವಿರುದ್ಧ ಸಿಎಂ ಎಚ್‌ಡಿ ಕುಮಾರಸ್ವಾಮಿ ಸಿಡಿದೆದ್ದಿದ್ದಾರೆ ಎನ್ನಲಾಗಿದೆ. ದರ್ಶನ್ ಅಭಿಮಾನಿ ಬಳಗವನ್ನೂ ಲೆಕ್ಕಿಸದ ಸಿಎಂ ಕುಮಾರಸ್ವಾಮಿ ದರ್ಶನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು “ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ಯಾರದು? ಅದು ಸಿನಿಮಾಗೆ ಮಾತ್ರ. ಜನರಿಗೆ ‘ಡಿ ಬಾಸ್’ ಆಗೋಕೆ ಆಗಲ್ಲ. ರೈತರಿಗೆ ‘ಡಿ ಬಾಸ್’ ಆಗೋಕೆ ಆಗಲ್ಲ. ಅವರದ್ದೇ ಅಭಿಮಾನಿ ಸಂಘಗಳು ಕೊಟ್ಟಿರ್ತಾರೆ, ಆರೂವರೆ ಕೋಟಿ ಜನ ಕೊಟ್ಟಿರೋದಾ ಅದು? ಯಾರೋ ನಾಲ್ಕು ಜನ ಕೊಟ್ಟಿರ್ತಾರೆ ಬಿಡಿ” ಎಂದು ಎಚ್ಡಿಕೆ ದರ್ಶನ್ ವಿರುದ್ಧ ಕಿಡಿಕಾರಿದ್ದಾರೆ.

ಸಿಎಂ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ದರ್ಶನ್ ”ಇದು ಅಭಿಮಾನಿಗಳು ಕೊಟ್ಟಿರುವ ಪ್ರೀತಿಯ ಭಿಕ್ಷೆ” ಎಂದು ಪರೋಕ್ಷವಾಗಿ ಮುಖ್ಯಮಂತ್ರಿಗೆ ತಿರುಗೇಟು ನೀಡಿದ್ದರು. ”ನನ್ ಮಗನಿಗೂ ಯುವರಾಜ ಅಂತ ಕೊಟ್ಟಿದ್ದಾರೆ. ಅದು ಯಾರೋ ನಾಲ್ಕು ಜನ. ಹಾಗಂತ ನಾವೇನೋ ಆಗ್ಬಿಟ್ಟಿದ್ದೀವಿ ಅಂತ ಮೆರೆಯೋಕೆ ಆಗುತ್ತಾ” ಎಂದು ಸಿಎಂ ಕುಮಾರಸ್ವಾಮಿ ನಟ ದರ್ಶನ್ ವಿರುದ್ಧ ಟೀಕಿಸಿದ್ದಾರೆ.

ಆದರೆ, ಮಹತ್ವದ ಬೆಳವಣಿಗೆ ಎಂಬಂತೆ “ಮಂಡ್ಯದಲ್ಲಿ ಶಾಂತಿಯುತ ಮತದಾನ ಆಗಬೇಕು” ಎಂದು ಸುಮಲತಾ ಮತ್ತು ದರ್ಶನ್ ಕೇಳಿಕೊಳ್ಳುತ್ತಿದ್ದಾರೆ. ಈ ಬಗ್ಗೆ ದರ್ಶನ್ ಕೂಡ ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಜನರಿಗೆ ಹಾಗೂ ತಮ್ಮ ಅಭಿಮಾನಿಗಳಿಗೆ ಆ ರೀತಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

About the author

ಕನ್ನಡ ಟುಡೆ

Leave a Comment