ರಾಷ್ಟ್ರ

ರೈತರಿಗೆ ಬೆಲೆ ನೀಡಲು ರಾಜ್ಯಗಳೊಂದಿಗೆ ಕೇಂದ್ರಸರ್ಕಾರ ಕಾರ್ಯನಿರ್ವಹಿಸಲಿದೆ ನರೇಂದ್ರಮೋದಿ

ನವದೆಹಲಿ: ರೈತರಿಗೆ ಬೆಲೆ ನೀಡಲು ರಾಜ್ಯಗಳೊಂದಿಗೆ ಕೇಂದ್ರಸರ್ಕಾರ ಕಾರ್ಯೋನ್ಮುಖವಾಗಿದೆ  ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.ಉತ್ಪಾದನಾ ವೆಚ್ಚದಲ್ಲಿ 1.5 ರಂತೆ   ಬೆಂಬಲದ ಬೆಲೆ ನೀಡಲಾಗುತ್ತಿದ್ದು ರೈತರ ಆದಾಯ ದುಪ್ಪಟ್ಟುಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಹಾಗೂ ಉತ್ಪನ್ನ ವೆಚ್ಚವನ್ನು ನಿರ್ಧರಿಸಲಿದ್ದು, 2022ರವೇಳೆಗೆ ರೈತರ ಆದಾಯ ದುಪ್ಪಟ್ಟುಗೊಳ್ಳಲಿದೆ ಎಂದು ನರೇಂದ್ರಮೋದಿ ತಿಳಿಸಿದ್ದಾರೆ.ಪುಸಾ ಕೃಷಿ ಸಂಕಿರಣದಲ್ಲಿ ಕೃಷಿ ಉನ್ನತಿ ಮೇಳ 2018ನ್ನುದ್ದೇಶಿಸಿ ಮಾತನಾಡಿದ ಅವರು. ರೈತರು ತೈಲೋತ್ಪನ್ನಗಳನ್ನು ಹೆಚ್ಚಿಗೆ ಬೆಳೆಯುವ ಮೂಲಕ ದೇಶವು   ಅಡುಗೆ ಅನಿಲವನ್ನು ಆಮಾದಿಗಾಗಿ ಬೇರೆ ದೇಶವನ್ನು ಅವಲಂಬಿಸಿರುವುದನ್ನು ತಪ್ಪಿಸಬೇಕೆಂದು ಕರೆ ನೀಡಿದರು.

ಬೆಳಗಳಿಗೆ ಬೆಂಕಿ ಹಚ್ಚುವುದಿಂದ ವಾಯುಮಾಲಿನ್ಯ ಹಾಗೂ ಭೂಮಿ ಸಾರ ಕಳೆದುಹೋಗುವುದರಿಂದ ಇದನ್ನು ತಡೆಗಟ್ಟುವಂತೆ ರೈತರಿಗೆ ಪ್ರಧಾನಿ ಮನವಿ ಮಾಡಿದರು.ರೈತರಿಗೆ ಉತ್ತಮ ತಳಿಯ ಬೀಜ ಹಾಗೂ ವಿದ್ಯುತ್ ಪೂರೈಸಲು ಸರ್ಕಾರ ಹಗಲು ರಾತ್ರಿ ಕೆಲಸ ಮಾಡುತ್ತಿದೆ.  ರೈತರ ಬೆಳೆಗಳಿಗೆ ಉತ್ತಮ ಬೆಲೆ ದೊರೆಯುವಂತೆ ಮಾಡಲು ಮಾರ್ಕೆಟ್ ಗಳಲ್ಲಿ ಯಾವುದೇ ತೊಂದರೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

“ಜೈವಿಕ ಖೇಥಿ ಪೋರ್ಟಲ್” ಬಿಡುಗಡೆಗೊಳಿಸಿದ ಪ್ರಧಾನಿ 25 ಕೃಷಿ ವಿಜ್ಞಾನ ಕೇಂದ್ರಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಕೃಷಿ ಕರ್ಮನ್ ಪ್ರಶಸ್ತಿ ಮತ್ತು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಕೃಷಿ ವಿಜ್ಞಾನ್ ಪ್ರೋತ್ಸಾಹ ಪುರಸ್ಕಾರವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

 

 

About the author

ಕನ್ನಡ ಟುಡೆ

Leave a Comment