ರಾಜ್ಯ

ರೈತರ ಉತ್ಪಾದಕ ಸ೦ಸ್ಥೆ : ಕರ್ನಾಟಕ, ದೇಶದಲ್ಲಿಯೇ ಮೊದಲ ಸ್ಥಾನ

ಕೆಲ ವರ್ಷಗಳಿಂದೀಚೆಗೆ ಅಸ್ತಿತ್ವಕ್ಕೆ ಬಂದಿರುವಸ್ವತಃ ರೈತರೇ ನಿರ್ವಹಿಸುವ ಕಂಪನಿಗಳ ಸ್ಥಾಪನೆಯಲ್ಲಿ ಕರ್ನಾಟಕದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ.  ರಾಜ್ಯದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ನಬಾರ್ಡ್ ಬೆಂಬಲಿತ 186 ರೈತರ ಸಣ್ಣ ಕಂಪನಿಗಳು(ಎಫ್ಪಿಒಕಂಪನಿಗಳ ಕಾಯಿದೆಯಡಿ ನೋಂದಣಿಯಾಗಿದ್ದುಇತರ ಎಲ್ಲ ರಾಜ್ಯಗಳನ್ನು ಹಿಂದಿಕ್ಕಿದೆನೆರೆಯ ತಮಿಳುನಾಡು ಎರಡನೇ ಹಾಗೂ ಮಧ್ಯಪ್ರದೇಶ ಮೂರನೇ ಸ್ಥಾನದಲ್ಲಿದೆ

ದೇಶದಲ್ಲಿ ಇಂಥ ಒಟ್ಟು 2,154 ಎಫ್ಪಿಒಗಳಿದ್ದುಬಹುತೇಕ ಎಲ್ಲವೂ ಕಂಪನಿಗಳ ಕಾಯಿದೆಯಡಿಯಲ್ಲಿವೆರೈತರಿಗೆ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ಗ್ರಾಹಕರಿಗೆ ತಮ್ಮಉತ್ಪನ್ನಗಳನ್ನು ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಲುಸಾಲಪಡೆಯಲು ಎಫ್ಪಿಒಗಳು.  ಸಹಕಾರಿಯಾಗಿವೆರೈತರುಪಶುಸಂಗೋಪನೆಮೀನುಗಾರಿಕೆನೇಕಾರಿಕೆಗ್ರಾಮೀಣಕರ ಕುಶಲಕರ್ಮಿಗಳು ಸಂಘಟಿತರಾಗಿ ಇಂಥ ಕಂಪನಿಗಳನ್ನು ಸ್ಥಾಪಿಸಬಹುದುಈ ಕುರಿತು ನಬಾರ್ಡ್ ಮಾರ್ಗದರ್ಶನತರಬೇತಿ ಹಾಗೂ ಹಣಕಾಸು ನೆರವನ್ನುಒದಗಿಸುತ್ತದೆ.

ತೆರಿಗೆ ವಿನಾಯಿತಿ:ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ  2018-19ರ ಬಜೆಟ್‌ನಲ್ಲಿ ರೈತರ ನೇತೃತ್ವದ ಕಂಪನಿಗಳಿಗೆ 5 ವರ್ಷಗಳ ತೆರಿಗೆ ರಜೆಯ ಸೌಲಭ್ಯವನ್ನೂ ಘೋಷಿಸಿದ್ದಾರೆಮಾರುಕಟ್ಟೆಯಲ್ಲಿ ಸೂಕ್ತ ಬೆಲೆಸಿಗದೆ ಸಂಕಷ್ಟಕ್ಕೀಡಾಗುವ ಸಣ್ಣರೈತರಿಗೆ ತಮ್ಮ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸಾಧ್ಯವಾದಷ್ಟು ಉತ್ತಮ ಬೆಲೆಪಡೆಯಲುಚೌಕಾಶಿ ನಡೆಸಲು ಎಫ್‌ಪಿಒಗಳು ಸಹಾಯಕ.  53,000 ರೈತರ ನೆಟ್‌ ವರ್ಕ್ ಕರ್ನಾಟಕದಲ್ಲಿ ಎಫ್‌ಪಿಒ ಗಳಲ್ಲಿ ಒಟ್ಟು 53,000ಕ್ಕೂ ಹೆಚ್ಚು ರೈತರು ಸದಸ್ಯರಾಗಿದ್ದಾರೆಕಳೆದ 2017-18ರಲ್ಲಿ ಸರಾಸರಿ 3.72 ಕೋಟಿ ರೂವಹಿವಾಟನ್ನು ಈ ಕಂಪನಿಗಳು ಮಾಡಿದ್ದುಮುಂಬರುವ ಸಾಲಿನಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.

About the author

ಕನ್ನಡ ಟುಡೆ

Leave a Comment