ರಾಜ್ಯ ಸುದ್ದಿ

ರೈತರ ಬಗೆಗಿನ ನಮ್ಮ ಕಾಳಜಿ ಬಿಜೆಪಿಗೆ ಇಲ್ಲ: ಡಿಸಿಎಂ ಪರಮೇಶ್ವರ್​

ಬೆಂಗಳೂರು: ರೈತರ ಬಗ್ಗೆ ನಮ್ಮ ಸರ್ಕಾರ ಇಟ್ಟುಕೊಂಡಿರುವ ನಿಲುವನ್ನು ಬಿಜೆಪಿಯವರು ಇಟ್ಟುಕೊಂಡಿಲ್ಲ. ಇಡೀ ದೇಶದಲ್ಲಿ ಬಿಜೆಪಿ ಎಲ್ಲೆಲ್ಲಿ ಆಡಳಿತ ನಡೆಸುತ್ತಿದೆಯೋ ಅಲ್ಲೆಲ್ಲ ರೈತರ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್​ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ತಿಲಕ್​ನಗರ ಪೊಲೀಸ್​ ಠಾಣೆ ಉದ್ಘಾಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ರೈತರ ಸಮಸ್ಯೆಗಳ ಬಗ್ಗೆ ಪ್ರಧಾನಿಯನ್ನು ಭೇಟಿ ಮಾಡಿ ತಿಳಿಸಿದ್ದರೂ ನಮಗೆ ಇನ್ನೂ ಯಾವ ಸ್ಪಂದನೆ ಸಿಕ್ಕಿಲ್ಲ. ಸಾಲಮನ್ನಾಕ್ಕೆ ನೆರವು ನೀಡುವುದಕ್ಕೂ ಕೇಂದ್ರ ಸ್ಪಂದಿಸಿಲ್ಲ. ನಮ್ಮನ್ನು ಟೀಕೆ ಮಾಡಲು ಬಿಜೆಪಿಯವರಿಗೆ ಯಾವುದೇ ನೈತಿಕತೆಯಿಲ್ಲ ಎಂದರು.

ರೈತರ ಪ್ರತಿಭಟನೆಯನ್ನು ನಾವು ತಡೆಯುವುದಿಲ್ಲ. ಕಾನೂನಿನಡಿ ಅವರಿಗೆ ಪ್ರತಿಭಟನೆ ಮಾಡಲು ಹಕ್ಕಿದೆ. ಆದರೆ, ಕಾನೂನು ಕೈಗೆತ್ತಿಕೊಂಡರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದ ಅವರು, ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸಲು ಸಿಎಂ ಎಚ್​.ಡಿ.ಕುಮಾರಸ್ವಾಮಿ ನಾಳೆ ರೈತರ ಪ್ರತಿನಿಧಿಗಳನ್ನು ಕರೆದಿದ್ದಾರೆ. ನಾಳೆ ನಡೆಯಲಿರುವ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಂಡು ಪರಿಹಾರ ಒದಗಿಸಲಾಗುವುದು ಎಂದರು.

ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಒಂದು ಟನ್​ ಕಬ್ಬಿಗೆ 450 ರೂ.​ ಬೆಂಬಲ ಬೆಲೆ ನೀಡುವಂತೆ ಕ್ರಮ ಕೈಗೊಂಡಿದ್ದೆವು. ಬಿಜೆಪಿಯವರು ಏನೇ ಟೀಕೆ ಟಿಪ್ಪಣಿ ಮಾಡಿದರೂ ನಾವು ರೈತರ ಪರವಾಗಿದ್ದೇವೆ. ಹಾಗಾಗಿಯೇ ನಾನು 49 ಕೋಟಿ ರೂ. ಸಾಲಮನ್ನಾ ಮಾಡುವ ಅತಿದೊಡ್ಡ ನಿರ್ಧಾರವನ್ನು ಕೈಗೊಂಡಿದ್ದೇವೆ ಎಂದರು.

About the author

ಕನ್ನಡ ಟುಡೆ

Leave a Comment