ರಾಜ್ಯ ಸುದ್ದಿ

ರೈತರ ಸಂಪೂರ್ಣ ಸಾಲಮನ್ನಾ ಮಾಡೇ ಮಾಡ್ತೀನಿ, ನಾನು ಪಲಾಯನ ಮಾಡುವುದಿಲ್ಲ: ಸಿಎಂ ಕುಮಾರಸ್ವಾಮಿ

ಶಿವಮೊಗ್ಗ: ರೈತರ ಸಂಪೂರ್ಣ ಸಾಲಮನ್ನಾ ಮಾಡೇ ಮಾಡುತ್ತೇನೆ. ನಾನು ಪಲಾಯನ ಮಾಡುವುದಿಲ್ಲ ಎಂದು ಸಿಎಂ ಎಚ್​.ಡಿ.ಕುಮಾರಸ್ವಾಮಿ ಭರವಸೆ ಮಾತುಗಳನ್ನಾಡಿದ್ದಾರೆ. ಸೊರಬದಲ್ಲಿ ಉಪಚುನಾವಣಾ ಪ್ರಚಾರದ ವೇಳೆ ಮಾತನಾಡಿ, ಮುಂದಿನ ತಿಂಗಳು ಬೆಂಗಳೂರಿನಲ್ಲಿ ರೈತರ ಬೃಹತ್​ ಸಮಾವೇಶ ನಡೆಸಿ, ಋಣಮುಕ್ತ ಪತ್ರ ನೀಡಲಾಗುವುದು ಎಂದರು.

ನನ್ನನ್ನು ಮನೆಗೆ ಕಳುಹಿಸುವ ಶಕ್ತಿ ಯಡಿಯೂರಪ್ಪ ಅವರಿಗೆ ಇಲ್ಲ. ನನಗೆ ಅಧಿಕಾರ ಕೊಟ್ಟಿರುವುದು ದೇವರು ಎಂದು ಬಿಎಸ್​ವೈಗೆ ಸವಾಲೆಸೆದ ಅವರು, ವರ್ಗಾವಣೆ ದಂಧೆಯಲ್ಲಿ ಒಂದೇ ಒಂದು ರೂ. ತೆಗೆದುಕೊಂಡಿದ್ದೇನೆ ಎಂದು ಸಾಬೀತು ಪಡಿಸಿದರೆ ನಾನೇ ಮನೆಗೆ ಹೋಗುತ್ತೇನೆ ಎಂದರು. ಕೇಂದ್ರ ಸರ್ಕಾರ ಸಿಬಿಐ ಎನ್ನುವ ತನಿಖಾ ಸಂಸ್ಥೆಯನ್ನು ನಗೆಪಾಟಲಿಗೆ ಈಡುಮಾಡಿದೆ. ಶಿವಮೊಗ್ಗದ ತುಂಬ ಯಡಿಯೂರಪ್ಪ ಅವರ ಆಸ್ತಿ ಇದೆ ಯಡಿಯೂರಪ್ಪ ಅಡಕೆ ತೋಟ ಮಾಡಿ, ನೀರು ಕಟ್ಟಿ ಆಸ್ತಿ ಮಾಡಿದ್ದಾರಾ? ಯಡಿಯೂರಪ್ಪ ಮಾಡಿರೋದು ಭ್ರಷ್ಟಾಚಾರದ ಆಸ್ತಿ ಎಂದರು. ಮಧು ಬಂಗಾರಪ್ಪ ವಿಧಾನಸಭೆಯಲ್ಲಿ ಸೋತಿದ್ದು ದೈವದ ಆಟ. ಕ್ಷೇತ್ರದ ಜನ ಮಧುವನ್ನು ಸೋಲಿಸಿಲ್ಲ. ಅದು ದೇವರ ಇಚ್ಛೆಯಾಗಿತ್ತು. 37 ಸ್ಥಾನ ಗೆದ್ದಿರುವ ಪಕ್ಷ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿರುವುದು ದೈವದ ಆಟ. ನಾನು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿರೋದು ದೇವರ ಇಚ್ಛೆ ಎಂದರು.

About the author

ಕನ್ನಡ ಟುಡೆ

Leave a Comment