ಸುದ್ದಿ

ರೈತರ ಸಾಲದಲ್ಲಿ 50 ಸಾವಿರ ಮಾತ್ರ ಮನ್ನ ;ಸಿ.ಎಂ

ಬೆಂಗಳೂರು: ಕಳೆದ ಕೆಲ ದಿನಗಳಿಂದ ವಿಪಕ್ಷ ಬಿಜೆಪಿ, ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ರೈತರ ಸಾಲ ಮನ್ನಾ ಮಾಡುವಂತೆ ತೀವ್ರವಾಗಿ ಸರ್ಕಾರವನ್ನು ಒತ್ತಾಯಿಸಿದ್ದವು.

ಆದ ಕಾರಣ ,ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ವಿಧಾನ ಸಭೆಯಲ್ಲಿ ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ 50 ಸಾವಿರ ವರೆಗಿನ ಸಾಲ ಮನ್ನಾ ಮಾಡಿರುವುದಾಗಿ ಘೋಷಿಸಿದರು.

ಸರ್ಕಾರದ ಈ ನಿರ್ಧಾರದಿಂದ ಬೊಕ್ಕಸಕ್ಕೆ 8165 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ತಿಳಿದು ಬಂದಿದೆ.ಜೂನ್‌ 20 ರ ವರೆಗಿನ ರೈತರ ಸಾಲಮನ್ನಾವಾಗಲಿದೆ ಎಂದು ಸಿಎಂ ಹೇಳಿದರು.

ರೈತರು ಪಡೆದಿರುವ ಸಾಲದಲ್ಲಿ 50 ಸಾವಿರ ರೂಪಾಯಿ ಮಾತ್ರ ಮನ್ನಾವಾಗಲಿದೆ.ಸರ್ಕಾರದ ನಿರ್ಧಾರ, ಸಾಲ ಪಡೆದಿರುವ 22,27,506 ರೈತರಿಗೆ ಅನುಕೂಲವಾಗಿದೆ ಎಂಬ ಅಂಕಿ ಅಂಶಗಳು ಲಭ್ಯವಾಗಿದೆ.

ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಸಾಲ ಮನ್ನಾ ಮಾಡಿದ ಸಕಾ೯ರದ ನಡೆಗೆ ಸ್ವಾಗತಿಸಿದ್ದಾರೆ ಹಾಗೂ,

ಬಿ.ಜೆ.ಪಿ ರಾಜ್ಯಾಧ್ಯಕ್ಷ್ಯ ಯಡಿಯೂರಪ್ಪ ಅವರು ಈ ಸಂದಭ೯ದಲ್ಲಿ ಮಾತಾಡಿ ತಮ್ಮ ನಿರೀಕ್ಷೆಗೆ ಒಂದು ಲಕ್ಷದವರೆಗೆ ಸಾಲ ಮನ್ನಾ ಮಾಡಬೇಕಿತ್ತು ಈಗಲೂ ಒತ್ತಾಯಿಸುವೆ,ನಮ್ಮ ಹೋರಾಟದ ಪರಿಣಾಮ ಅರಿತು ಸರಕಾರ ಈ ನಿಧಾ೯ರ ತೆಗೆದುಕೊಂಡಿದೆ ಎಂದು ಅಭಿಪ್ರಾಯಪಟ್ಟರು.

About the author

ಕನ್ನಡ ಟುಡೆ

Leave a Comment