ರಾಜ್ಯ ಸುದ್ದಿ

ರೈತ ಸಾಲಮನ್ನಾ ಯೋಜನೆಗೆ ಅಧಿಕೃತ ಚಾಲನೆ: 2 ತಾಲ್ಲೂಕಿನ 477 ರೈತರಿಗೆ ಸಾಲ ಮುಕ್ತ ಪ್ರಮಾಣಪತ್ರ ಹಸ್ತಾಂತರ

ಬೆಂಗಳೂರು: ರಾಜ್ಯ ಸರ್ಕಾರ ರೈತರ ಸಾಲಮನ್ನಾ ಯೋಜನೆಯಡಿ  49 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲು ಯೋಜನೆ ತಯಾರಿಸಿದ್ದು ಇದರ ಪ್ರಾರಂಭಿಕ ಹಂತವಾಗಿ ಶನಿವಾರ 477 ರೈತರಿಗೆ ಸಾಲ ಮುಕ್ತ ಪ್ರಮಾಣಪತ್ರಗಳನ್ನು ಹಸ್ತಾಂತರಿಸಲಾಗಿದೆ.
ಸಾಲಮನ್ನಾ ಯೋಜನೆ ಜಾರಿ ವಿಳಂಬವಾಗಿದ್ದ ಕಾರಣ ರೈತರು ಹಾಗೂ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ನಿನ್ನೆ ದೊಡ್ಡಬಳ್ಳಾಪುರದ 100 ರೈತರಿಗೆ ಸಾಲ ಮುಕ್ತ ಪ್ರಮಾಣಪತ್ರ ನೀಡಿದ್ದಾರೆ. ಇದೇ ವೇಳೆ ಸಮ್ಮಿಶ್ರ ಸರ್ಕಾರದ ಸಹಕಾರಿ ಸಚಿವರಾದ ಬಂಡೆಪ್ಪ ಕಾಶಂಪೂರಕಲಬುರಗಿ ಜಿಲ್ಲೆಯ ಸೇಡಂ ನ 377 ರೈತರಿಗೆ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದರು . “ನಿರಂತರ ಸಾಲಬಾಧೆಯಿಂದ ಬಳಲುತ್ತಿರುವ ರೈತರ ನೆರವಿಗಾಗಿ ಸಾಲಮನ್ನಾ ಯೋಜನೆ ತಯಾರಿಸಲಾಗಿದೆ.ಇದೀಗ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದ್ದು  ರೈತರಲ್ಲಿ ಗೊಂದಲವನ್ನು ಸೃಷ್ಟಿಸಲು ಪ್ರಯತ್ನಿಸುವವರಿಗೆ ಉತ್ತರ ನೀಡಿದ್ದೇನೆ” ಯೋಜನೆ ಕಾರ್ಯರೂಪಕ್ಕೆ ತರುವಲ್ಲಿ ಸರ್ಕಾರದ ಬದ್ದತೆಯನ್ನು ಪ್ರಶ್ನಿಸಿದ ಪ್ರತಿಪಕ್ಷಗಳಿಗೆ ಕುಮಾರಸ್ವಾಮಿ ಉತ್ತರಿಸಿದ್ದಾರೆ.
ರಾಜ್ಯ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಸಾಲ ಮನ್ನಾ ಯೋಜನೆ ಜಾರಿ ವಿಳಂಬದ ಕುರಿತು ಸರ್ಕಾರವನ್ನು ತಿವಿಯಲು ಬಿಜೆಪಿ ಯೋಜಿಸಿತ್ತು. ರಾಜ್ಯಾದ್ಯಂತ ಯೋಜನೆ ಜಾರಿಯ ಕುರಿತು ಮಾತನಾಡಿದ ಕುಮಾರಸ್ವಾಮಿ ರಾಷ್ಟ್ರೀಕೃತ ಬ್ಯಾಂಕುಗಳು, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.10 ಸುತ್ತುಗಳ ಸಭೆ ನಡೆಸಿದ ಹೊರತಾಗಿಯೂ, ರಾಷ್ಟ್ರೀಕೃತ ಬ್ಯಾಂಕುಗಳು ರಾಜ್ಯ ಸರ್ಕಾರಕ್ಕೆ ಸಹಕಾರ ನೀಡುತ್ತಿಲ್ಲ. ನಮ್ಮ ಮನವಿಗೆ ಕೇಂದ್ರ ಸರ್ಕಾರ ಸಹ ಪ್ರತಿಸ್ಪಂದಿಸುತ್ತಿಲ್ಲ.” ಅವರು ಹೇಳಿದ್ದಾರೆ.
ಶನಿವಾರ ಸಾಲಮುಕ್ತ ಪ್ರಮಾಣಪತ್ರ ಸ್ವೀಕರಿಸಿದ 477 ರೈತರು ಸಹಕಾರಿ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಪಡೆದವರಾಗಿದ್ದಾರೆ. ನವೆಂಬರ್ ನಲ್ಲಿ ಸೇಡಂ ಹಾಗೂ ದೊಡ್ಡಬಳ್ಳಾಪುರದಲ್ಲಿ ಸಾಲ ಮನ್ನಾ ಯೊಜನೆ ಜಾರಿಯಾಗಿತ್ತು.ಶನಿವಾರ ರೈತರಿಗೆ ನೀಡಲಾದ ಪ್ರಮಾಣಪತ್ರಗಳಿಗೆ ಆಯಾ ಬ್ಯಾಂಕುಗಳ ವ್ಯವಸ್ಥಾಪಕರು ಸಹಿ ಮಾಡಿದ್ದಾರೆ.ಇದರೊಡನೆ ರೈತರು ಹೊಸ ಸಾಲಕ್ಕೆ ಅರ್ಹರಾಗುತ್ತಾರೆ.

About the author

ಕನ್ನಡ ಟುಡೆ

Leave a Comment