ರಾಜ್ಯ ಸುದ್ದಿ

ರೈಮ್ಸ್​ ಹೇಳಲಿಲ್ಲವೆಂದು ವಿದ್ಯಾರ್ಥಿಗೆ ಎದ್ವಾತದ್ವಾ ಥಳಿಸಿದ ಶಿಕ್ಷಕಿ

ತುಮಕೂರು: ಇಂಗ್ಲಿಷ್​ ರೈಮ್ಸ್​ ಹೇಳದ ಒಂದನೇ ತರಗತಿ ವಿದ್ಯಾರ್ಥಿಗೆ ​ಸರ್ಕಾರಿ ಶಾಲೆಯ ಶಿಕ್ಷಕಿ ಎದ್ವಾತದ್ವಾ ಥಳಿಸಿರುವ ಘಟನೆ ಮಧುಗಿರಿ ತಾಲೂಕಿನ ಬ್ಯಾಲ್ಯ ಗ್ರಾಮದಲ್ಲಿ ನಡೆದಿದೆ.

ಶಿಕ್ಷಕಿ ಸೌಮ್ಯ ಈ ಕೃತ್ಯ ಎಸಗಿದ್ದಾರೆ. ನಂದೀಶ್ ಎಂಬ ಬಾಲಕ ರೈಮ್ಸ್​ ಹೇಳದಿದ್ದಾಗ ಕೋಪಗೊಂಡ ಶಿಕ್ಷಕಿ ಮನಸೋ ಇಚ್ಛೆ ಬೆತ್ತದಿಂದ ಥಳಿಸಿದ್ದಾರೆ. ಶಾಲೆಯಿಂದ ಮನೆಗೆ ವಾಪಸ್ ಬಂದಾಗ ಪಾಲಕರಿಗೆ ಬಾಲಕ ವಿಷಯ ತಿಳಿಸಿದ್ದಾನೆ. ಸದ್ಯ ಬಾಲಕನಿಗೆ ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಶಿಕ್ಷಕಿಯ ವಿರುದ್ಧ ಪಾಲಕರು ಗರಂ ಆಗಿದ್ದಾರೆ.

About the author

ಕನ್ನಡ ಟುಡೆ

Leave a Comment