ರಾಜ್ಯ ಸುದ್ದಿ

ರೈಲಿನಲ್ಲಿ ಸಾಗಿಸುತ್ತಿದ್ದ ದಾಖಲೆರಹಿತ ರೂ.1.5 ಕೋಟಿ ನಗದು ಹಣ ವಶ, ಮೂವರ ಬಂಧನ

ಉಡುಪಿ: ದಾಖಲೆಗಳಿಲ್ಲದೆ ರೈಲಿನಲ್ಲಿ ಸಾಗಿಸಲಾಗುತ್ತಿದ್ದ 1.50 ಕೋಟಿ ರು.ಗೆ ಅಧಿಕ ಮೊತ್ತದ ನಗದನ್ನು ಉಡುಪಿ ಜಿಲ್ಲೆ ಇಂದ್ರಾಳಿಯಲ್ಲಿ ರೈಲ್ವೆ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ರಾಜಸ್ಥಾನ ಮೂಲದ ಮೂವರು ವ್ಯಕ್ತಿಗಳನ್ನು ಬಂಧಿಸ;ಲಾಗಿದೆ.
ಮುಂಬೈಯಿಂದ ಎರ್ನಾಕುಲಂಗೆ ಸಂಚರಿಸುವ ನೇತ್ರಾವತಿ ಎಕ್ಸ್‌ಪ್ರೆಸ್‌ (ನಂ.16345)  ರೈಲಿನಲ್ಲಿ ಈ ಅಕ್ರಮ ನಗದು ಸಾಗಣೆ ನಡೆಇದೆ.ನೇತ್ರಾವತಿ ಎಕ್ಸ್​ಪ್ರೆಸ್​ನ ಬೋಗಿಯಲ್ಲಿ ರಾಜಸ್ಥಾನ ಮೂಲದ ಇಬ್ಬರು ವ್ಯಕ್ತಿಗಳು ನಗದನ್ನು ಸಾಗಿಸುತ್ತಿದ್ದರು.ಇತ್ತ ಹಣವನ್ನು ಪಡೆಯುವುದಕಾಗಿ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಓರ್ವ ವ್ಯ್ಕತಿ ಕಾದಿದ್ದನೆನ್ನಲಾಗಿದೆ. ನೇತ್ರಾವತಿ ಎಕ್ಸ್‌ಪ್ರೆಸ್‌ನಲ್ಲಿ ಪದೇ ಪದೇ ನಡೆವ ಕಳ್ಳತನದ ಪ್ರಕರಣವನ್ನು ಬೇಧಿಸಲು ರೈಲ್ವೆ ಪೋಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾಗ ಎಸಿ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ವ್ಯಕ್ತಿಗಳ ನಡವಳಿಕೆ ಶಂಕಾಸ್ಪದವಾಗಿದ್ದು ಟಿಕೆಟ್ ಕೇಳಿದಾಗ ಟಿಕೆಟ್ ನಲ್ಲಿದ್ದ ಹೆಸರು, ಆರೋಪಿಗಳು ಬೇರೆಯಾಗಿರುವುದು ಪತ್ತೆಯಾಗಿದೆ. ವಿಚಾರಣೆ ತೀವ್ರಗೊಳಿಸಿ ಅವರ ಬ್ಯಾಗ್ ಶೋಧನೆ ಮಾಡಿದಾಗ ಒಂದೂವರೆ ಕೋಟಿಗೆ ಅಧಿಕ ಮೌಲ್ಯದ ನಗದು ಪತ್ತೆಯಾಗಿದೆ. ಸಧ್ಯ ವಿಚಾರಣೆ ಮುಂದುವರಿದಿದ್ದು ಐಟಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರರೆ ತಹಶಿಲ್ದಾರ್ ಹಾಗು ಚುನಾವಣಾಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಣದ ಮೂಲ್ದ ಪತ್ತೆಗಾಗಿ ತೀವ್ರ ಸ್ವರೂಪದ ತನಿಖೆ ನಡೆದಿದೆ. ನಾಳೆ ಶಿವಮೊಗ್ಗ ಲೋಕಸಭಾ ಉಪಚುನಾವಣೆ ಇದ್ದು ಇದು ಚುನಾವಣೆಗಾಗಿ ಮತದಾರ್ರಿಗೆ ಹಂಚಲೆಂದು ತಂದ ಹಣವಾಗಿದೆಯೆ ಎನ್ನುವ ಬಗ್ಗೆ ಸಹ ಶಂಕೆ ವ್ಯಕ್ತವಾಗಿದೆ

About the author

ಕನ್ನಡ ಟುಡೆ

Leave a Comment