ರಾಷ್ಟ್ರ

ರೈಲ್ವೆ ಆದಾಯ ಹೆಚ್ಚಳಕ್ಕೊಂದು ಜನ್ ಭಾಗೀಧಾರ್ ಸ್ಕೀಮ್

ಭಾರತೀಯ ರೈಲ್ವೆ ಇಲಾಖೆ ತನ್ನ ಆದಾಯ ಹೆಚ್ಚಿಸಿಕೊಳ್ಳಲು ಈ ಬಾರಿ ಪ್ರಯಾಣಿಕರನು ನೆಚ್ಚಿಕೊಂಡಿದೆ. ಮುಖ್ಯವಾಗಿ ಯಾರು ಇಲಾಖೆಯ ಆದಾಯ ಹೆಚ್ಚಿಸುವ ಐಡಿಯಾ ನೀಡುತ್ತಾರೋ ಅವರಿಗೆ 10 ಲಕ್ಷ ರೂ. ಬಹುಮಾನ ನೀಡುವ ಮೂಲಕ ಬೆನ್ನು ತಟ್ಟುವ ‘ಜನ್‌ಭಾಗೀಧಾರ್’ ಯೋಜನೆ ರೂಪಿಸಿದೆ.ಮುಖ್ಯವಾಗಿ ಆದಾಯವೃದ್ಧಿಗೆ ವಿಶೇಷ ಐಡಿಯಾಗಳು, ವ್ಯವಹಾರ ವೃದ್ಧಿಯ ಹೊಸ ಚಿಂತನೆ, ಪ್ರಯಾಣಿಕರನ್ನು ಸೆಳೆಯುವ ಯೋಜನೆಗಳು ಇದ್ದರೆ ರೈಲ್ವೆ ಇಲಾಖೆಯ ಜತೆ ಹಂಚಿಕೊಂಡು ಆದಾಯ ಹೆಚ್ಚಿಸುವ ಮೂಲಕ ಬಹುಮಾನ ಗೆಲ್ಲಿ ಎಂದು ರೈಲ್ವೆ ಇಲಾಖೆ ಮೈ ಗವರ್ನಮೆಂಟ್ ಟ್ವಿಟರ್ ಖಾತೆ ಯಲ್ಲಿ ಮಾಹಿತಿ ಹಂಚಿಕೊಂಡಿದೆ.ಈ ಸ್ಪರ್ಧೆಯಲ್ಲಿ ಮಿತಿ ನಿಗದಿ ಮಾಡಿಕೊಳ್ಳಲಾಗಿದೆ.  ಬಿಸಿನೆಸ್ ಪ್ಯಾಸೆಂಜರ್, ಸರ್ವಿಸಸ್ ಸೇರಿದಂತೆ ಕೆಲವು ಸೇವೆಗಳಿಗೆ ಮಾತ್ರ ಈ ಈ ಯೋಜನೆ ಇಟ್ಟು ಕೊಳ್ಳಲಾಗಿದೆ. ಹೊಸ ಸ್ಟೇಶನ್, ಹೊಸ ಹಳಿಗಳ ನಿರ್ಮಾಣ ಆಡಳಿತಾತ್ಮಕ ವ್ಯವಸ್ಥೆ, ಸಾರ್ವಜನಿಕರಿಂದ ಬಂಡವಾಳ ಹೂಡಿಕೆ ಮುಖ್ಯವಾದ ವಿಚಾರಗಳು ಇದರಲ್ಲಿ ಅಡಕವಾಗಿವೆ. Mygovt.in ವೆಬ್ಸೈಟ್ ಮೂಲಕ್ ಲಾಗಿನ್ ಆಗಬೇಕು. ಅರ್ಜಿ ಭರ್ತಿಮಾಡಿದ ಬಳಿಕ, ಇಮೇಲ್‌ ವೊಂದು ಸಂಬಂಧ ಪಟ್ಟ ಅರ್ಜಿದಾರನಿಗೆ ಬರುತ್ತದೆ.

ಅರ್ಜಿ ಸಲ್ಲಿಸಲು ಮೇ19 ಕೊನೆಯ ದಿನ

ಸ್ಪರ್ಧೆಯ ಕೊನೆಯ ದಿನ ಮೇ 19, 2018 ಆಗಿದೆ. ಸ್ಪರ್ಧೆಯಲ್ಲಿ ಯಾರು ಬೇಕಾದರೂ ಭಾಗವಹಿಸುವ ಅವಕಾಶ ಇರುತ್ತದೆ. ವಯಸ್ಸು ಮಾತ್ರ 18 ದಾಟಿರಬೇಕು. ಆದರೆ ಇಲಾಖೆಯ ಒಳಗಿನವರು, ಸಂಬಂಧಿಕರು ಭಾಗವಹಿಸುವ ಅವಕಾಶವಿಲ್ಲ, ಇಂಗ್ಲಿಷ್ ಹಾಗು ಹಿಂದಿ ಮಾತ್ರ ಭಾಷೆಯನ್ನಾಗಿ ಬಳಸಬಹುದು. ಮೊದಲ ಬಹುಮಾನ 10 ಲಕ್ಷ, ಎರಡನೇ ಬಹುಮಾನ 5 ಲಕ್ಷ, ಮೂರನೇದ್ದು 3, ನಾಲ್ಕನೇಯದ್ದು1 ಲಕ್ಷವಾಗಿರುತ್ತದೆ.

About the author

ಕನ್ನಡ ಟುಡೆ

Leave a Comment